ರಾಯಚೂರು : ಬಡವರಿಗೆ ಪ್ರಧಾನಮಂತ್ರಿ ಉಜ್ಜಲ ಯೋಜನೆಯಡಿ ನೀಡುತ್ತಿರುವ ಗ್ಯಾಸ್‌ಗಳನ್ನ ದುರ್ಬಳಕೆ ಮಾಡಿಕೊಳ್ಳುತ್ತಿರುವ ಗ್ಯಾಸ್ ಏಜೆನ್ಸಿಗಳ ಮೇಲೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿದರು.
ಪ್ರಧಾನಮಂತ್ರಿ ಉಜ್ವಲ ಯೋಜನೆ ಗೋಲ್‌ಮಾಲ್.. ಗ್ಯಾಸ್ ಏಜೆನ್ಸಿಗಳ ಮೇಲೆ ಅಧಿಕಾರಿಗಳ ದಾಳಿ
ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಗ್ಯಾಸ್ ನೀಡುತ್ತಿರುವ ಗ್ಯಾಸ್ ಎಜೆನ್ಸಿಗಳ ಮೇಲೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ನಗರದ ಹೊರವಲಯದ ಮನ್ಸಲಾಪುರ ರಸ್ತೆಯಲ್ಲಿರುವ ಎಚ್.ಪಿ. ಕಂಪನಿಯ ವಿತರಕರಾದ ವಿಜಯ ಗ್ಯಾಸ್ ಏಜೆನ್ಸಿ ಸೇರಿದಂತೆ ನಾನಾ ಕಡೆ ದಾಳಿ ನಡೆಸಿ, ಉಜ್ಜಲ್ ಯೋಜನೆಯಡಿ ಸಮರ್ಕಪವಾದ ಮಾಹಿತಿ ನೀಡದೆ ಇರುವುದಕ್ಕೆ ಏಜೆನ್ಸಿ ಮಾಲೀಕರಿಗೆ ತರಾಟೆ ತೆಗೆದುಕೊಂಡರು. ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿ ಗ್ಯಾಸ್ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಆರೋಪ ಮತ್ತು ದೂರುಗಳು ಬಂದಿದ್ದವು. ಹೀಗಾಗಿ ಇಂದು ಅಧಿಕಾರಿಗಳು ದಾಳಿ ನಡೆಸಿದ್ರು.
ದಾಳಿ ವೇಳೆ ಏಜೆನ್ಸಿಯಿಂದ ಪ್ರತಿ ತಿಂಗಳು ಉಜ್ವಲ ಯೋಜನೆಯಡಿ ಅರ್ಹ ಫಲಾನುಭವಿಗಳ ಪಟ್ಟಿ ನೀಡುವಂತೆ ಸೂಚಿಸಿದ್ದರು. ಆದರೆ, ಇದಕ್ಕೆ ಏಜೆನ್ಸಿಗಳು ಅಸಮರ್ಪಕ ಮಾಹಿತಿ ನೀಡಿದ್ದವು. ಇದರಿಂದ ಮಾಲೀಕರ ವಿರುದ್ದ ಗರಂ ಆದ ಉಪನಿರ್ದೇಶಕರು ಸಂಜೆ ವೇಳೆ ಸಮಪರ್ಕವಾದ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಏಜೆನ್ಸಿ ಪರವಾನಿಗೆ ರದ್ದಿತಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಸಿದರು.