ಕರ್ನಾಟಕ

karnataka

ETV Bharat / state

ಪ್ರಧಾನಿ ಮೋದಿ ದೇಶದ ಸ್ವಾಭಿಮಾನವನ್ನ ಎತ್ತಿ ಹಿಡಿದಿದ್ದಾರೆ: ಸಂಸದ ರಾಜಾ ಅಮರೇಶ್ವರ ನಾಯಕ

ಕೊರೊನಾ ಲಾಕ್‌ಡೌನ್​​ನಿಂದ ದೇಶದ ಆರ್ಥಿಕತೆ ಹದಗೆಟ್ಟಿದೆ. ದೇಶದ ಗಡಿಗಳಲ್ಲಿ ಪ್ರಕ್ಷುಬ್ಧ ವಾತಾವರಣ ಇದ್ದರೂ, ಮೋದಿ ಅವರು ದೇಶದ ಸ್ವಾಭಿಮಾನವನ್ನ ಎತ್ತಿ ಹಿಡಿದಿದ್ದಾರೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದ್ರು.

ಸಂಸದ ರಾಜಾ ಅಮರೇಶ್ವರ ನಾಯಕ
ಸಂಸದ ರಾಜಾ ಅಮರೇಶ್ವರ ನಾಯಕ

By

Published : Jul 10, 2020, 7:37 PM IST

ರಾಯಚೂರು: ಕೋವಿಡ್-19 ಹಾಗೂ ದೇಶದ ಗಡಿಗಳಲ್ಲಿ ಪ್ರಕ್ಷುಬ್ಧ ವಾತಾವರಣ ಇದ್ದರೂ, ಪ್ರಧಾನಿ ಮೋದಿ ದೇಶದ ಸ್ವಾಭಿಮಾನವನ್ನ ಎತ್ತಿ ಹಿಡಿದಿದ್ದಾರೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದ್ದಾರೆ.

ಸಂಸದ ರಾಜಾ ಅಮರೇಶ್ವರ ನಾಯಕ

ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಲಾಕ್‌ಡೌನ್​​ನಿಂದ ಹಲವು ರಾಷ್ಟ್ರಗಳ ಆರ್ಥಿಕ ವ್ಯವಸ್ಥೆ ತತ್ತರಿಸಿ ಹೋಗಿದೆ. ಅದರಂತೆ ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರೂ, ಜನತೆಗೆ ಹಲವು ಯೋಜನೆಗಳನ್ನ ಪ್ರಧಾನಿಯವರು ನೀಡಿದ್ದಾರೆ. ಆತ್ಮನಿರ್ಭರ್ ಯೋಜನೆಯಡಿ‌ ಕೊರೊನಾ ಹಿನ್ನೆಲೆ 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆತ್ಮನಿರ್ಭರ್​ ಭಾರತ್ ಯೋಜನೆಯಡಿಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 1.10 ಲಕ್ಷ ಕೋಟಿ ರೂಪಾಯಿ ಸಾಲದ ‌ಯೋಜನೆ ಜಾರಿಗೊಳಿಸಿದ್ದಾರೆ. ಇದರಿಂದ 30 ಲಕ್ಷ ಕೈಗಾರಿಕೆಗಳಿಗೆ ನೆರವಾಗಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ 1.70 ಲಕ್ಷ ಕೋಟಿ ಬಡ ಮತ್ತು ವಲಸೆ ಕಾರ್ಮಿಕರಿಗೆ ಅನುಕೂಲವಾಗಿದೆ. ಇದಲ್ಲದೇ ಮೀನುಗಾರಿಕೆ ಸೇರಿದಂತೆ ದೇಶದ ಜನತೆಗೆ ಅನುಕೂಲವಾಗುವಂತ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದರು.

ABOUT THE AUTHOR

...view details