ಕರ್ನಾಟಕ

karnataka

ETV Bharat / state

ಕಾಂಗ್ರೆಸ್​ನಲ್ಲಿ ಉಸಿರುಗಟ್ಟುವ ವಾತಾವರಣವಿತ್ತು.. ಪ್ರತಾಪ್ ಗೌಡ ಪಾಟೀಲ್ - ಉಪಚುನಾವಣೆ ಬಗ್ಗೆ ಪ್ರತಾಪ್ ಗೌಡ ಪಾಟೀಲ್ ಹೇಳಿಕೆ

ರಾಜ್ಯದಲ್ಲಿ ಬಿಜೆಪಿ ಗೆದ್ದು ಬರುವ ಸಂಪೂರ್ಣ ವಿಶ್ವಾಸವಿದೆ. ಕಾಂಗ್ರೆಸ್​ನಲ್ಲಿ ಉಸಿರುಗಟ್ಟುವ ವಾತಾವರಣವಿತ್ತು. ಅಲ್ಲದೆ ಹಿರಿತನ ಗುರುತಿಸುವ ಕೆಲಸ ಪಕ್ಷದಿಂದ ಆಗಲಿಲ್ಲ. ಜಿಲ್ಲೆಯಲ್ಲಿನ ಗುಂಪುಗಾರಿಕೆ ಬೇಸರ ತರಿಸಿತ್ತು. ಜಿಲ್ಲೆಯಲ್ಲಿ ನಾಲ್ಕು ಶಾಸಕರಿದ್ದರೂ ಸಚಿವ ಸ್ಥಾನ ನೀಡಲಿಲ್ಲ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರತಾಪ್ ಗೌಡ ಪಾಟೀಲ್

By

Published : Nov 17, 2019, 4:21 PM IST

ರಾಯಚೂರು:ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿ ರಾಜೀನಾಮೆ ನೀಡಬೇಕಾಯಿತು ಎಂದು ಅನರ್ಹ ಶಾಸಕ ಪ್ರತಾಪ್​ ಗೌಡ ಪಾಟೀಲ್ ಹೇಳಿದ್ದಾರೆ.

ಪ್ರತಾಪ್ ಗೌಡ ಪಾಟೀಲ್, ಅನರ್ಹ ಶಾಸಕ

ರಾಯಚೂರಿನಲ್ಲಿ ಮಾತನಾಡಿದ ಅವರು, ಸ್ಪೀಕರ್ ಅನರ್ಹಗೊಳಿಸಿದ ಬಳಿಕ ಸುಪ್ರಿಂಕೋರ್ಟ್ ಚುನಾವಣೆಗೆ ಅವಕಾಶ ನೀಡಿದೆ. ಮಸ್ಕಿ, ಆರ್‌ಆರ್‌ನಗರ ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿಲ್ಲ. ಅಕ್ರಮ ಮತದಾನವಾಗಿದೆ ಎಂದು ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿರುವ ಬಿಜೆಪಿ ನಾಯಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಟ್ಟು ಅರ್ಜಿ ವಾಪಸ್​ ಪಡೆಯುವಂತೆ ತಿಳಿಸಿದರೆ, ನಮ್ಮ ಕ್ಷೇತ್ರದಲ್ಲೂ ಚುನಾವಣೆ ನಡೆಯುತ್ತದೆ ಎಂದಿದ್ದಾರೆ.

ಇನ್ನು, ಬಿಜೆಪಿ ನನ್ನ ಮಾತೃ ಪಕ್ಷ. ಮೊದಲ ಬಾರಿ ಬಿಜೆಪಿಯಿಂದ ಆಯ್ಕೆಯಾಗಿದ್ದೆ. ಬಿಎಸ್​ವೈ ರಾಜೀನಾಮೆಯಿಂದ ಪಕ್ಷ ಬಿಡಬೇಕಾಯಿತು. ರಾಜ್ಯದಲ್ಲಿ ಬಿಜೆಪಿ ಗೆದ್ದು ಬರುವ ಸಂಪೂರ್ಣ ವಿಶ್ವಾಸವಿದೆ. ಕಾಂಗ್ರೆಸ್​ನಲ್ಲಿ ಉಸಿರುಗಟ್ಟುವ ವಾತಾವರಣವಿತ್ತು. ಅಲ್ಲದೆ ಹಿರಿತನ ಗುರುತಿಸುವ ಕೆಲಸ ಪಕ್ಷದಿಂದ ಆಗಲಿಲ್ಲ. ಜಿಲ್ಲೆಯಲ್ಲಿನ ಗುಂಪುಗಾರಿಕೆ ಬೇಸರ ತರಿಸಿತ್ತು. ಜಿಲ್ಲೆಯಲ್ಲಿ ನಾಲ್ಕು ಶಾಸಕರಿದ್ದರೂ ಸಚಿವ ಸ್ಥಾನ ನೀಡಲಿಲ್ಲ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details