ರಾಯಚೂರು:ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಜಿಲ್ಲೆಯ ಶಕ್ತಿನಗರ ಆರ್ಟಿಪಿಎಸ್ ವಿದ್ಯುತ್ ಕೇಂದ್ರದಲ್ಲಿ ಉತ್ಪಾದನೆ ಹೆಚ್ಚಳಗೊಂಡಿದೆ.
ಆರ್ಟಿಪಿಎಸ್ ಕೇಂದ್ರದಲ್ಲಿ ಹೆಚ್ಚಳಗೊಂಡ ವಿದ್ಯುತ್ ಉತ್ಪಾದನೆ.. - Raichur
ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಜಿಲ್ಲೆಯ ಶಕ್ತಿನಗರ ಆರ್ಟಿಪಿಎಸ್ ವಿದ್ಯುತ್ ಕೇಂದ್ರದಲ್ಲಿ ಉತ್ಪಾದನೆ ಹೆಚ್ಚಳಗೊಂಡಿದೆ. 8 ವಿದ್ಯುತ್ ಘಟಕಗಳಿಂದ 1,225 ಮೆಗಾವ್ಯಾಟ್ ವಿದ್ಯುತ್‌ನ ರಾಜ್ಯ ವಿದ್ಯುತ್ ಜಾಲಕ್ಕೆ ರವಾನಿಸಲಾಗುತ್ತಿದೆ.
![ಆರ್ಟಿಪಿಎಸ್ ಕೇಂದ್ರದಲ್ಲಿ ಹೆಚ್ಚಳಗೊಂಡ ವಿದ್ಯುತ್ ಉತ್ಪಾದನೆ.. Power Generation increased at RTPS](https://etvbharatimages.akamaized.net/etvbharat/prod-images/768-512-5364310-thumbnail-3x2-mng.jpg)
ಒಟ್ಟು 1,720 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿರುವ ಕೇಂದ್ರದಲ್ಲಿ, ಪ್ರಸುತ್ತ 8 ವಿದ್ಯುತ್ ಘಟಕಗಳಿಂದ 1,225 ಮೆಗಾವ್ಯಾಟ್ ವಿದ್ಯುತನ್ನು ರಾಜ್ಯ ವಿದ್ಯುತ್ ಜಾಲಕ್ಕೆ ರವಾನಿಸಲಾಗುತ್ತಿದೆ. ಪ್ರವಾಹದಿಂದ ರಾಜ್ಯದಲ್ಲಿರುವ ಜಲಮೂಲಗಳಿಂದ ವಿದ್ಯುತ್ ಉತ್ಪಾದನೆ ಹೆಚ್ಚಳವಾಗಿತ್ತು. ಆದ್ದರಿಂದ ಕಲ್ಲಿದಲು ಮೂಲಕ ಉತ್ಪಾದಿಸುವ ಕೇಂದ್ರಗಳಿಗೆ ವಿದ್ಯುತ್ ಬೇಡಿಕೆ ಇರಲಿಲ್ಲ. ಹೀಗಾಗಿ ಕೆಲ ಘಟಕಗಳಿಂದ ವಿದ್ಯುತ್ ಉತ್ಪಾದನೆ ಮಾಡುತ್ತಿರುವುದು ಹೊರತುಪಡಿಸಿದ್ರೆ, ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡುತ್ತಿರಲಿಲ್ಲ.
ಇದೀಗ ಕಳೆದರೆಡು ದಿನಗಳಿಂದ ವಿದ್ಯುತ್ ಬೇಡಿಕೆ ಬಂದಿರುವುದರಿಂದ ಕಲ್ಲಿದಲ್ಲು ಉತ್ಪಾದಿಸುವ ಆರ್ಟಿಪಿಎಸ್ ವಿದ್ಯುತ್ ಡಿಮ್ಯಾಂಡ್ ಬಂದಿದ್ದು, 8 ಘಟಕಗಳಿಂದ ವಿದ್ಯುತ್ ಉತ್ಪಾದಿಸುತ್ತಿದೆ.