ಕರ್ನಾಟಕ

karnataka

By

Published : Jan 9, 2022, 11:48 AM IST

ETV Bharat / state

ಕೊರೊನಾ ನಿಯಮ ಗಾಳಿಗೆ ತೂರಿದ ಜನ: ಲಾಠಿ‌ ರುಚಿ ತೋರಿಸಿದ ಪೊಲೀಸರು

ರಾಯಚೂರು ಜಿಲ್ಲೆಯಲ್ಲಿ ಕೋವಿಡ್​ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ತರಕಾರಿ, ಅಗತ್ಯ ವಸ್ತುಗಳು, ಮಾಂಸ ಖರೀದಿಸಲು ಜನರು ಮುಗಿ ಬಿದ್ದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ‌ ಪ್ರಯೋಗಿಸಿದರು.

Raichur
ರಾಯಚೂರಿನಲ್ಲಿ ಜನರಿಗೆ ಲಾಠಿ‌ ರುಚಿ ತೋರಿಸಿದ ಪೊಲೀಸರು

ರಾಯಚೂರು: ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರೂ ಕೂಡ ನಿಯಮ ಪಾಲಿಸದ ಜನರಿಂದ ಬೇಸತ್ತ ಪೊಲೀಸರು ಲಾಠಿ‌ ಬೀಸುವ ಮೂಲಕ ಸಾರ್ವಜನಿಕರನ್ನು ಮನೆಗೆ ವಾಪಸ್ ಕಳುಹಿಸಿದರು.

ಕೊರೊನಾ ಸೋಂಕು ನಿಯಂತ್ರಣಕ್ಕೆ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ಆದ್ರೆ ನಗರದಲ್ಲಿ ಕೋವಿಡ್​ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ತರಕಾರಿ, ಅಗತ್ಯ ವಸ್ತುಗಳು, ಮಾಂಸ ಖರೀದಿಸಲು ಜನರು ಮುಗಿ ಬಿದ್ದ ಕಾರಣ ಪೊಲೀಸರು ಲಾಠಿ‌ ಪ್ರಯೋಗಿಸಿ ಜನರನ್ನು ಚದುರಿಸಿದ್ದಾರೆ.

ಸದರ ಬಜಾರ್ ಠಾಣೆ ಸಿಪಿಐ ಫಸೀಯುದ್ದೀನ್ ಹಾಗೂ ಸಿಬ್ಬಂದಿ ಲಾಠಿ ಏಟು ನೀಡುವ ಮೂಲಕ ಜನಸಂದಣಿ ಆಗದಂತೆ ನಿಯಂತ್ರಿಸಿದ್ದಾರೆ. ಲಾಠಿ ಏಟಿಗೆ ಬೆದರಿದ ಜನ, ಎದ್ನೋ ಬಿದ್ನೋ ಎಂಬಂತೆ ಓಡಿ ಹೋದ ದೃಶ್ಯ ಕಂಡು ಬಂತು.

ಇದನ್ನೂ ಓದಿ:ಸುಲ್ಲಿ ಡೀಲ್ಸ್‌ 'ಹರಾಜು' ಆ್ಯಪ್‌ ಸೃಷ್ಟಿಕರ್ತನ ಬಂಧಿಸಿದ ದೆಹಲಿ ವಿಶೇಷ ಪೊಲೀಸ್

ABOUT THE AUTHOR

...view details