ಕರ್ನಾಟಕ

karnataka

ETV Bharat / state

ಅಕ್ರಮ ಮರಳು ಅಡ್ಡೆ ಮೇಲೆ ದಾಳಿ: ಲಕ್ಷಾಂತರ ರೂ ಮೌಲ್ಯದ ಮರಳು ವಶಕ್ಕೆ - ರಾಯಚೂರು ಲಕ್ಷಾಂತರ ರೂ ಮೌಲ್ಯದ ಮರಳು ವಶಕ್ಕೆ

ರಾಯಚೂರು ಅಕ್ರಮ ಮರಳು ಅಡ್ಡೆ ಮೇಲೆ ದಾಳಿ ನಡೆಸಿ ಲಕ್ಷಾಂತರ ರೂ. ಮೌಲ್ಯದ ಮರಳನ್ನು ದೇವದುರ್ಗ ಪೊಲೀಸರು ಜಪ್ತಿ ಮಾಡಿದ್ದಾರೆ.

Police raid for illegal sand
ಅಕ್ರಮ ಮರಳು ಅಡ್ಡೆ ಮೇಲೆ

By

Published : Dec 30, 2019, 11:47 AM IST

ರಾಯಚೂರು: ಅಕ್ರಮ ಮರಳು ಅಡ್ಡೆ ಮೇಲೆ ದಾಳಿ ನಡೆಸಿ ಲಕ್ಷಾಂತರ ರೂ. ಮೌಲ್ಯದ ಮರಳನ್ನು ದೇವದುರ್ಗ ಪೊಲೀಸರು ಜಪ್ತಿ ಮಾಡಿದ್ದಾರೆ.

ದೇವದುರ್ಗ ತಾಲೂಕಿನ ನಿಲವಂಜಿ ಗ್ರಾಮದ ಬಳಿ ಅಕ್ರಮ ಮರಳು ಸಂಗ್ರಹದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 7 ಲಕ್ಷ ಮೌಲ್ಯದ 1400 ಮೆಟ್ರಿಕ್ ಟನ್ ಮರಳನ್ನು ಜಪ್ತಿ ಮಾಡಿದ್ದಾರೆ.

ಬಸಪ್ಪ ಈರಪ್ಪ ಹೂವಿನಹೆಡಗಿ ಎಂಬುವವರ ಮೇಲೆ ದೇವದುರ್ಗ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೃಷ್ಣ ನದಿಯಲ್ಲಿ ಪ್ರವಾಹದಿಂದ ಹೇರಳವಾಗಿ ಮರಳು ಸಂಗ್ರಹವಾಗಿದ್ದು, ಅಕ್ರಮ ಮರಳು ದಂಧೆಕೋರರಿಗೆ ವರದಾನವಾಗಿದೆ ಎನ್ನಲಾಗಿದೆ.

ABOUT THE AUTHOR

...view details