ಬೀದಿಗಿಳಿದ ಯುವಕರಿಗೆ ಬಸ್ಕಿ ಹೊಡೆಸಿದ ಪೊಲೀಸರು.. ಹಿಂಗಾ ಆಗ್ಬೇಕು ನಿಮ್ಗೇ.. - raichur police news
ಯಾಕ್ರೋ ಲಾಕ್‌ಡೌನ್ ಇದ್ರೂ ಹೊರಗೆ ವಾಹನಗಳಲ್ಲಿ ಸಂಚರಿಸ್ತಿದ್ದೀರಿ ಅಂತಾ ಕೇಳಿದ್ರೆ ಇಲ್ಲದ ಸಬೂಬು ಹೇಳಿ ಯುವಕರು ಪೊಲೀಸರಿಂದ ಭಿನ್ನ ಶಿಕ್ಷೆಗೆ ಗುರಿಯಾಗಿದ್ದಾರೆ.
ಬೀದಿಗಿಳಿದ ಯುವಕರಿಗೆ ಬಸ್ಕಿ ಹೊಡೆಸಿದ ಖಾಕಿ.
ರಾಯಚೂರು :ಅನಶ್ಯಕವಾಗಿ ಬೈಕ್‌ನಲ್ಲಿ ಓಡಾಡುತ್ತಿದ್ದ ಯುವಕರಿಗೆ ಪೊಲೀಸರು ಬಸ್ಕಿ ಹೊಡೆಸುವ ಮೂಲಕ ವಿಭಿನ್ನವಾಗಿ ಶಿಕ್ಷೆ ನೀಡಿದ್ದಾರೆ. ತಾಲೂಕಿನ ಶಕ್ತಿನಗರದ 2ನೇ ಕ್ರಾಸ್ ಬಳಿಯ ಚೆಕ್ ಪೋಸ್ಟ್ನಲ್ಲಿ ಯುವಕರಿಗೆ ಬಸ್ಕಿ ಹೊಡೆಸಿದ್ದಾರೆ. ದ್ವಿಚಕ್ರ ವಾಹನ ಸವಾರರು ಓಡಾಡುತ್ತಿದ್ದರೂ ಪೊಲೀಸರು ವಿಚಾರಿಸಿದಾಗ, ಕ್ಷುಲ್ಲಕ ನೆಪ ಹೇಳಿದ್ದಾರೆ. ಹೀಗಾಗಿ ಪೊಲೀಸರು ಸಾಮೂಹಿಕವಾಗಿ ಯುವಕರನ್ನ ಬಸ್ಕಿ ಹೊಡೆಸಿ ಮತ್ತೆ ಮನೆಯಿಂದ ಆಚೆ ಬಾರದಂತೆ ಹೇಳಿ ಕಳುಹಿಸಿದ್ದಾರೆ.