ಕರ್ನಾಟಕ

karnataka

ETV Bharat / state

ಕುರಿಗಳ್ಳರ ಬಂಧನಕ್ಕೆ ತೆರಳಿದ್ದ ಪೊಲೀಸರ ಮೇಲೆ ಯುವಕರಿಂದ ಹಲ್ಲೆ - ಇಡಪನೂರು ಪೊಲೀಸ್ ಠಾಣೆ

ಕುರಿ ಕಳ್ಳತನ ಪ್ರಕರಣ ಸಂಬಂಧ ಆರೋಪಿಗಳ ಬಂಧನಕ್ಕಾಗಿ ರಾಯಚೂರು ತಾಲೂಕಿನ ಇಡಪನೂರು ಪೊಲೀಸ್ ಠಾಣೆಯ ನಾಲ್ವರು ಸಿಬ್ಬಂದಿ ಕಡಿವೆಲ್ಲಾ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ, ಪೊಲೀಸರ ಮೇಲೆ ಯುವಕರು ಹಲ್ಲೆ ನಡೆಸಿದ್ದಾರೆ.

police-personnels-attacked-by-youths-in-andras-village
ಕುರಿಗಳ್ಳರ ಬಂಧನಕ್ಕೆ ತೆರಳಿದ್ದ ಪೊಲೀಸರ ಮೇಲೆ ಯುವಕರಿಂದ ಹಲ್ಲೆ

By

Published : Jul 21, 2021, 11:00 AM IST

ರಾಯಚೂರು:ಕುರಿಗಳ್ಳತನ ಸಂಬಂಧ ಆರೋಪಿಗಳ ಬಂಧಿಸಲು ಆಂಧ್ರದ ಕರ್ನೂಲ್​​ಗೆ ಭೇಟಿ ನೀಡಿದ್ದ ಜಿಲ್ಲೆಯ ಇಡಪನೂರು ಪೊಲೀಸರ ಮೇಲೆ ಹಲ್ಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆಂಧ್ರದ ಎಮ್ಮಿಗನೂರ್ ಜಿಲ್ಲೆಯ ಕಡಿವೆಲ್ಲಾಕುರಿದಲ್ಲಿ ಗ್ರಾಮಕ್ಕೆ ಭೇಟಿ ನೀಡಿದ್ದಾಗ ಈ ಘಟನೆ ನಡೆದಿದೆ.

ಘಟನೆಯಲ್ಲಿ ಕಾನ್ಸ್​ಟೇಬಲ್ ಹನುಮಂತ್​​ರಾವ್ ತಲೆಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುರಿ ಕಳ್ಳತನ ಪ್ರಕರಣ ಸಂಬಂಧ ಆರೋಪಿಗಳ ಬಂಧನಕ್ಕಾಗಿ ರಾಯಚೂರು ತಾಲೂಕಿನ ಇಡಪನೂರು ಪೊಲೀಸ್ ಠಾಣೆಯ ನಾಲ್ವರು ಪೊಲೀಸರು ಕಡಿವೆಲ್ಲಾ ಗ್ರಾಮಕ್ಕೆ ತೆರಳಿದ್ದರು.

ಈ ವೇಳೆ, ಗ್ರಾಮದ ಕೆಲ ಯುವಕರ ಗುಂಪು ಮಫ್ತಿಯಲ್ಲಿದ್ದ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾರೆ. ಕೈಗೆ ಸಿಕ್ಕ ಕಲ್ಲುಗಳಿಂದ ಪೊಲೀಸರ ಮೇಲೆ ಹಲ್ಲೆ ಮಾಡಿದ್ದು, ಪೊಲೀಸರು ಅಲ್ಲಿಂದ ತಮ್ಮ ವಾಹನ ಏರಿ ಜೀವ ಉಳಿಸಿಕೊಂಡಿದ್ದಾರೆ. ಬಳಿಕ ಎಮ್ಮಿಗನೂರು ಪೊಲೀಸ್ ಠಾಣೆಗೆ ತಲುಪಿದ್ದು, ಅಲ್ಲಿಂದ ಗಾಯಗೊಂಡ ಸಿಬ್ಬಂದಿಯನ್ನ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ಆಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಓದಿ:ಸಿಲಿಕಾನ್​ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು: ಇಬ್ಬರು ರೌಡಿಶೀಟರ್​ಗಳ ಕಾಲಿಗೆ ಗುಂಡೇಟು

ABOUT THE AUTHOR

...view details