ಕರ್ನಾಟಕ

karnataka

ETV Bharat / state

ರಾಯಚೂರಲ್ಲಿ ತುಂಗಭದ್ರಾ ನಾಲೆ ಮೇಲೆ ಪೊಲೀಸರ ಗಸ್ತು - ನಾಲೆಯಲ್ಲಿ ಗೇಜ್ ಮೈಂಟೇನ್

ತುಂಗಭದ್ರಾ ಎಡದಂಡೆ ನಾಲೆಯ ರಾಯಚೂರಿನ ಕೆಳಭಾಗದ ರೈತರಿಗೆ ಕೃಷಿ ಚಟುವಟಿಕೆಗಾಗಿ ನೀರು ಹರಿಬಿಟ್ಟ ಹಿನ್ನೆಲೆಯಲ್ಲಿ ನಾಲೆಯಲ್ಲಿ ಗೇಜ್ ಮೈಂಟೇನ್ ಮಾಡಲು ಪೊಲೀಸರ ಗಸ್ತು ಹಾಕಲಾಗಿದೆ.

ತುಂಗಭದ್ರಾ ನಾಲೆ ಮೇಲೆ ಪೊಲೀಸರ ಗಸ್ತು

By

Published : Sep 1, 2019, 8:58 AM IST

ರಾಯಚೂರು:ತುಂಗಭದ್ರಾ ಎಡದಂಡೆ ನಾಲೆಯ ರಾಯಚೂರಿನ ಕೆಳಭಾಗದ ರೈತರಿಗೆ ಕೃಷಿ ಚಟುವಟಿಕೆಗಾಗಿ ನೀರು ಹರಿಬಿಟ್ಟ ಹಿನ್ನೆಲೆಯಲ್ಲಿ ನಾಲೆಯಲ್ಲಿ ಗೇಜ್ ಮೈಂಟೇನ್ ಮಾಡಲು ಪೊಲೀಸರ ಗಸ್ತು ಹಾಕಲಾಗಿದೆ.

ತುಂಗಭದ್ರಾ ನಾಲೆ ಮೇಲೆ ಪೊಲೀಸರ ಗಸ್ತು

ಸಿಂಧನೂರು ಉಪ ವಿಭಾಗದ ಪೊಲೀಸ್ ಅಧಿಕಾರಿಗಳೊಂದಿಗೆ ತುಂಗಭದ್ರಾ ಎಡದಂಡೆ ನಾಲೆಯ 47ನೇ ಡಿಸ್ಟ್ರಿಬ್ಯೂಟರ್​ನಿಂದ ಮಸ್ಕಿಯವರೆಗೆ ಗಸ್ತು ನೆಡೆಸಿದ್ರು. 37ನೇ ಮತ್ತು 38 ನೇ ಡಿಸ್ಟ್ರಿಬ್ಯೂಟರ್​ಗಳಲ್ಲಿ ಬಿಡಲಾಗುತ್ತಿದ್ದ ಹೆಚ್ಚುವರಿ ನೀರಿನ ಪ್ರಮಾಣವನ್ನ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕಡಿಮೆ ಮಾಡಲಾಗಿದೆ.

ಇನ್ನು ಕಾಲುವೆಯ ಕೆಳಭಾಗದ ರೈತರಿಗೆ ನೀರು ತಲುಪುವಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ರೈತರು ಅನಧಿಕೃತವಾಗಿ ಪಂಪ್ ಸೆಟ್​​ಗಳನ್ನು ಬಳಸಿ, ನೀರನ್ನು ಬಳಸದಂತೆ ಮನವಿ ಮಾಡಿದ್ದಾರೆ. ಈಗಾಗಲೇ ಕೆಳಭಾಗದ ವ್ಯಾಪ್ತಿಯ ರೈತರಿಗೆ ಸಮರ್ಪಕ ನೀರು ನಿರ್ವಹಣೆ ಹಿನ್ನೆಲೆ ತುಂಗಭದ್ರಾ ಎಡದಂಡೆ ನಾಲೆಯ 100 ಮೀಟರ್ ವ್ಯಾಪ್ತಿಯಲ್ಲಿ ಮುಂಜಾಗ್ರತ ಕ್ರಮವಾಗಿ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ಎಸ್ಪಿ ಡಾ. ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.

ABOUT THE AUTHOR

...view details