ETV Bharat Karnataka

ಕರ್ನಾಟಕ

karnataka

ETV Bharat / state

ರಾಯಚೂರಿನಲ್ಲಿ ರೈತರ ರೈಲು ತಡೆಗೆ ಪೊಲೀಸರ ಅಡ್ಡಿ! - Raichur Rail Rokho

ಸಂಯುಕ್ತ ರೈತ ಸಂಘರ್ಷ ಸಮಿತಿ ನೇತೃತ್ವದಲ್ಲಿ ರೈತರು, ರಾಯಚೂರಿನ ರೈಲ್ವೆ ನಿಲ್ದಾಣಕ್ಕೆ ಬರುವ ಮುಂಬೈ - ಬೆಂಗಳೂರು ಕುರ್ಲಾ ಎಕ್ಸೆಪ್ರೆಸ್ ರೈಲು ತಡೆಯಲು ನಿರ್ಧರಿಸಿದ್ದರು. ಆದರೆ, ರೈಲು ತಡೆಯಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದಿದ್ದಾರೆ.

Police obstruct farmers' train block at Raichur
ರಾಯಚೂರಿನಲ್ಲಿ ರೈತರ ರೈಲು ತಡೆಗೆ ಪೊಲೀಸರ ಅಡ್ಡಿ!
author img

By

Published : Feb 18, 2021, 1:39 PM IST

ರಾಯಚೂರು: ನಗರದ ರೈಲ್ವೆ ನಿಲ್ದಾಣಕ್ಕೆ ನುಗ್ಗಲು ಮುಂದಾದ ಪ್ರತಿಭಟನಾ ನಿರತ ರೈತರನ್ನು ಪೊಲೀಸರು ಬ್ಯಾರಿಕೇಡ್​ ಹಾಕಿ ತಡೆದರು.

ಕೃಷಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ರೈಲು ತಡೆ ಚಳವಳಿ ನಡೆಸಲಾಗುತ್ತಿದೆ. ಹೀಗಾಗಿ, ಸಂಯುಕ್ತ ರೈತ ಸಂಘರ್ಷ ಸಮಿತಿ ನೇತೃತ್ವದಲ್ಲಿ ರೈತರು ರಾಯಚೂರಿನ ರೈಲ್ವೆ ನಿಲ್ದಾಣಕ್ಕೆ ಬರುವ ಮುಂಬೈ - ಬೆಂಗಳೂರು ಕುರ್ಲಾ ಎಕ್ಸೆಪ್ರೆಸ್ ರೈಲು ತಡೆಯಲು ನಿರ್ಧರಿಸಿದ್ದರು. ಆದರೆ, ರೈಲು ತಡೆಯಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದರು.

ಇದರಿಂದ ಆಕ್ರೋಶಗೊಂಡ ರೈತರು, ಬ್ಯಾರಿಕೇಡ್ ತಳ್ಳಿ ನುಗ್ಗಲು ಯತ್ನಿಸಿದರು. ಈ ವೇಳೆ, ಪೊಲೀಸರು ಹಲವು ರೈತರನ್ನು ಬಂಧಿಸಿದ್ದು, ಪೊಲೀಸರು ಹಾಗೂ ರೈತರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಜೊತೆಗೆ ರೈಲ್​ ರೋಖೋ ಚಳವಳಿಗೆ ಅವಕಾಶ ನೀಡದಿರುವುದಕ್ಕೆ ರೈತರು, ಪೊಲೀಸರು ಹಾಗೂ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

author-img

...view details