ಕರ್ನಾಟಕ

karnataka

ETV Bharat / state

ಈ ಪೊಲೀಸರದು ಒಂಚೂರು ಅತೀ ಆಗಲಿಲ್ವಾ.. ಡಿಗ್ರೂಪ್ ನೌಕರನ ಮೇಲೆ ಲಾಠಿಚಾರ್ಜ್.. - ಡಿ ಗ್ರೂಪ್ ನೌಕರನ ಮೇಲೆ ಪೊಲೀಸರಿಂದ ಲಾಠಿಚಾರ್ಜ್

ಔಷಧಿಯನ್ನ ತೆಗೆದುಕೊಂಡು ವಾಪಸ್ ಆಸ್ಪತ್ರೆಗೆ ತೆರಳುವ ವೇಳೆ ಸೂಪರ್ ಮಾರ್ಕೆಟ್ ಬಳಿ ಐಡಿ ಕಾರ್ಡ್ ತೋರಿಸಿದ್ರು ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

Police Lathi charge  on D Group employee
ಡಿ ಗ್ರೂಪ್ ನೌಕರನ ಮೇಲೆ ಪೊಲೀಸರಿಂದ ಲಾಠಿಚಾರ್ಜ್

By

Published : Mar 30, 2020, 4:38 PM IST

ರಾಯಚೂರು: ಆರೋಗ್ಯ ಇಲಾಖೆ ಡಿ ಗ್ರೂಪ್ ನೌಕರನ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ. ಇದರಿಂದಾಗಿ ಆ ನೌಕರ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಡಿ ಗ್ರೂಪ್ ನೌಕರನ ಮೇಲೆ ಪೊಲೀಸರಿಂದ ಲಾಠಿಚಾರ್ಜ್..
ಹೆಚ್ ಶಿವರಾಜ್ ಹಲ್ಲೆಗೊಳದ ನೌಕರ..

ನಗರದ ಮಾವಿನಕೆರೆ ಸಮೀಪದ ಹೆರಿಗೆ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಹೆಚ್.ಶಿವರಾಜ್ ಹಲ್ಲೆಗೊಳದ ನೌಕರ. ಆಸ್ಪತ್ರೆಗೆ ಬೇಕಾಗಿರುವ ಔಷಧಿಯನ್ನ‌ ತರುವುದಕ್ಕೆ ಮಾವಿನ ಕೆರೆಯಿಂದ ಡಿಹೆಚ್‌ಒ‌ ಆಫೀಸ್‌ಗೆ ಬಂದಿದ್ದ ಎನ್ನಲಾಗಿದೆ. ಔಷಧಿಯನ್ನ ತೆಗೆದುಕೊಂಡು ವಾಪಸ್ ಆಸ್ಪತ್ರೆಗೆ ತೆರಳುವ ವೇಳೆ ಸೂಪರ್ ಮಾರ್ಕೆಟ್ ಬಳಿ ಐಡಿ ಕಾರ್ಡ್ ತೋರಿಸಿದ್ರು ಪೊಲೀಸರುಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಲಾಠಿಚಾರ್ಜ್​ನಿಂದ ನೌಕರ ಗಂಭೀರವಾಗಿ ಗಾಯಗೊಂಡಿದ್ದು, ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಜಾರ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ABOUT THE AUTHOR

...view details