ರಾಯಚೂರು :ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿ ಮೂರು ಬೈಕ್ ವಶಪಡಿಸಿಕೊಂಡಿದ್ದಾರೆ.
ಬೈಕ್ ಕಳ್ಳ ರಾಯಚೂರು ಪೊಲೀಸರ ಬಲೆಗೆ: 3 ಬೈಕ್ ಜಪ್ತಿ - ರಾಯಚೂರು ಬೈಕ್ ಕಳ್ಳ ಅರೆಸ್ಟ್ ನ್ಯೂಸ್
ಬೈಕ್ ಕಳ್ಳತನ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿ ಮೂರು ಬೈಕ್ ವಶಪಡಿಸಿಕೊಳ್ಳುವಲ್ಲಿ ರಾಯಚೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ರಾಯಚೂರು ಬೈಕ್ ಕಳ್ಳ ಪೊಲೀಸರ ಬಲೆಗೆ......3 ಬೈಕ್ ವಶ
ಆರೋಪಿ ಮಲ್ಲೇಶ(22) ನನ್ನು ಬಂಧಿಸಿ, ಎರಡು ಬೈಕ್ ಹಾಗೂ ಒಂದು ಟಿವಿಎಸ್ ಎಕ್ಸೆಲ್ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೂರು ಬೈಕ್ ಕಳ್ಳತನ ಮಾಡಿದ ಆರೋಪಿ ಹಿರೋ ಎಚ್.ಎಫ್.ಡಿಲಕ್ಸ್ ನಂಬರ್ ಪ್ಲೇಟ್ ಚೇಂಜ್ ಮಾಡಿ ಬಳಸಿಕೊಂಡರೆ ಮತ್ತೆರಡು ಬೈಕ್ ಮನೆಯಲ್ಲಿಟ್ಟಿದ್ದ
ಇನ್ನೂ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಸಾಬಯ್ಯ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.