ಕರ್ನಾಟಕ

karnataka

ETV Bharat / state

ಎಂಗೇಜ್​ಮೆಂಟ್​ ಆದ ಹುಡುಗಿ ಮಾತನಾಡುತ್ತಿಲ್ಲ ಎಂದು ಬೇಸರ: ಪೊಲೀಸ್​ ಪೇದೆ ಆತ್ಮಹತ್ಯೆ - ಈಚನಾಳತಾಂಡ ಪೊಲೀಸ್ ಕಾನ್ಸ್​ಸ್ಟೇಬಲ್ ಆತ್ಮಹತ್ಯೆ

ಮದುವೆಯಾಗಬೇಕಿದ್ದ ಹುಡುಗಿ ಮಾತನಾಡಲಿಲ್ಲ ಅಂತಾ ಪೊಲೀಸ್​ ಕಾನ್ಸ್​ಸ್ಟೇಬಲ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಲಿಂಗಸುಗೂರು ತಾಲೂಕು ವ್ಯಾಪ್ತಿಯಲ್ಲಿ ನಡೆದಿದೆ.

suicide
suicide

By

Published : May 10, 2021, 7:32 PM IST

ರಾಯಚೂರು: ಮದುವೆಗೆ ನಿಶ್ಚಯಿಸಿದ ಹುಡುಗಿ ಮಾತನಾಡಲಿಲ್ಲ ಅಂತಾ ಜಿಗುಪ್ಸೆಗೊಂಡು ಪೊಲೀಸ್ ಪೇದೆಯೊಬ್ಬ ನೇಣಿಗೆ ಶರಣಾಗಿದ್ದಾನೆ.

ಜಿಲ್ಲೆಯ ಲಿಂಗಸುಗೂರು ತಾಲೂಕು ಈಚನಾಳ ತಾಂಡಾ ಪೊಲೀಸ್ ಕಾನ್ಸ್​ಸ್ಟೇಬಲ್ (ಇಂಟಲಿಜೆನ್ಸಿ) ಚನ್ನಪ್ಪ ರಾಠೋಡ್​​ ಮೃತ ದುರ್ದೈವಿ. ಬೆಂಗಳೂರಿನ ಇಂಟಲಿಜೆನ್ಸಿ ವಿಭಾಗದಲ್ಲಿ ಕರ್ತವ್ಯದಲ್ಲಿದ್ದರು. ನಾಲ್ಕು ತಿಂಗಳ ಹಿಂದೆ ಮದುವೆಗೆ ಎಂದು ಹುಡುಗಿ ನಿಶ್ಚಯ ಮಾಡಲಾಗಿತ್ತು. ಅವಳು ಮಾತನಾಡುತ್ತಿಲ್ಲ ಎಂದು ನೊಂದು ಭಾನುವಾರ ರಜೆಯ ಮೇಲೆ ಊರಿಗೆ ಬಂದಿದ್ದ ಚನ್ನಪ್ಪ ಜಮೀನಿನ ಮರವೊಂದಕ್ಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ ಎಂದು ತಾಯಿ ರಾಮವ್ವ ದೂರು ನೀಡಿದ್ದಾರೆ.

ಅಸ್ವಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡ ಪಿಎಸ್ಐ ಪ್ರಕಾಶರೆಡ್ಡಿ ಡಂಬಳ ತನಿಖೆ ಮುಂದುವರೆಸಿದ್ದಾರೆ. ಸಿಪಿಐ ಮಹಾಂತೇಶ ಸಜ್ಜನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ABOUT THE AUTHOR

...view details