ಕರ್ನಾಟಕ

karnataka

ಪುರಾತ್ವತ ಇಲಾಖೆಯ ಸ್ಥಳದಲ್ಲಿ ಅನಧಿಕೃತವಾಗಿ ಬೋರ್​ವೆಲ್ ನಿರ್ಮಾಣಕ್ಕೆ ಪೊಲೀಸರ ಬ್ರೇಕ್​

ಪುರಾತ್ವತ ಇಲಾಖೆ ವ್ಯಾಪ್ತಿಗೆ ಬರುವ ಕೋಟೆಯ ಪಕ್ಕದಲ್ಲಿ ಅನಧಿಕೃತ ಬೋರ್ ವೆಲ್ ನಿರ್ಮಾಣಕ್ಕೆ ಮುಂದಾಗಿದ್ದನ್ನು ಸದರ್ ಬಜಾರ್ ಠಾಣೆ ಪಿಎಸ್‌ಐ ಉಮೇಶ ಕಾಂಬಳೆ ತಂಡ ಭೇಟಿ ಬೋರ್ ವೆಲ್ ಕೊರೆಸುವುದನ್ನ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

By

Published : Apr 28, 2019, 10:40 AM IST

Published : Apr 28, 2019, 10:40 AM IST

Updated : Apr 28, 2019, 11:11 AM IST

ಪುರಾತ್ವತ ಇಲಾಖೆಯ ಸ್ಥಳ

ರಾಯಚೂರು: ನಗರದ ಪುರಾತ್ವತ ಇಲಾಖೆ ವ್ಯಾಪ್ತಿಗೆ ಬರುವ ಕೋಟೆಯ ಪಕ್ಕದಲ್ಲಿ ಅನಧಿಕೃತವಾಗಿ ಬೋರವೆಲ್ ಕೊರಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ನಗರದ ಉಸ್ಮಾನಿಯ ಮಾರುಕಟ್ಟೆಯ ಹಿಂಬದಿಯ ಐತಿಹಾಸಿಕ ಹಿನ್ನೆಲೆಯುಳ್ಳ ಕೋಟೆ ಗೋಡೆಯ ಪಕ್ಕದಲ್ಲಿ ನಿನ್ನೆ ತಡರಾತ್ರಿ ಬೋರ್ ವೆಲ್ ಕೊರಸಲು ಖಾಸಗಿ ವ್ಯಕ್ತಿಗಳು ಮುಂದಾಗಿದ್ದಾರೆ. ಈ ಬೋರ್ವೆಲ್ ಕೊರೆತದಿಂದ ಕೋಟೆಗೆ ಧಕ್ಕೆಯಾಗುವ ಸಾಧ್ಯತೆಯಿದೆ. ಅಲ್ಲದೇ ಪುರಾತ್ವತ ಇಲಾಖೆಯ ವ್ಯಾಪ್ತಿಗೆ ಬರುವ ಜಾಗದಲ್ಲಿ ಇಂತಹ ಚಟುವಟಿಕೆಗಳನ್ನು ಮಾಡಬಾರದು ಎನ್ನುವ ನಿಯಮವಿದೆ.

ಆದ್ರೆ ಪುರಾತ್ವತ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಐತಿಹಾಸಿಕ ಚರಿತ್ರೆ ಯುಳ್ಳ ಕೋಟೆಗೆ ಧಕ್ಕೆ ಆಗಿ ನಶಿಸಿ ಹೋಗುವ ಭೀತಿ ಎದುರಾಗಿದೆ. ಸದ್ಯ ಘಟನೆ ತಿಳಿಯುತ್ತಿದ್ದಂತೆ ಸದರ್ ಬಜಾರ್ ಠಾಣೆ ಪಿಎಸ್‌ಐ ಉಮೇಶ ಕಾಂಬಳೆ ತಂಡ ಭೇಟಿ ಬೋರ್ ವೆಲ್ ಕೊರೆಸುವುದನ್ನ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಆದ್ರೆ ಇಷ್ಟೆಲ್ಲಾ ಅಕ್ರಮ ನಡೆದರು ತಮಗೆ ಏನು ಸಂಬಂಧವಿಲ್ಲದಂತೆ ಪುರಾತ್ವತ ಇಲಾಖೆ ಮೌನ ವಹಿಸಿರುವುದು ಸ್ಥಳೀಯ ಆಕ್ರೋಶಕ್ಕೆ ಕಾರಣವಾಗಿದೆ.

Last Updated : Apr 28, 2019, 11:11 AM IST

For All Latest Updates

TAGGED:

ABOUT THE AUTHOR

...view details