ಕರ್ನಾಟಕ

karnataka

ETV Bharat / state

ರಾಯಚೂರಲ್ಲಿ ದರೋಡೆ ಗ್ಯಾಂಗ್​ ಅಂದರ್​.. ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಚಾಲಾಕಿಗಳ ಬಂಧನ - ತುರುವಿಹಾಳ ಪೊಲೀಸ್ ಠಾಣೆ

ರಾಯಚೂರು ಜಿಲ್ಲೆಯಲ್ಲಿ ಮನೆಯೊಳಗೆ ನುಗ್ಗಿ ಬೆದರಿಸಿ ದರೋಡೆ ಮಾಡುತ್ತಿದ್ದ ಅಂತಾರಾಜ್ಯ ದರೋಡೆಕೋರರ ಖತರ್ನಾಕ್ ಗ್ಯಾಂಗ್​ಅನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಮನೆಯೊಳಗೆ ನುಗ್ಗಿ ಬೆದರಿಸಿ ದರೋಡೆ ಮಾಡುತ್ತಿದ್ದ ಗ್ಯಾಂಗ್ ಪೊಲೀಸರ ವಶ
ಮನೆಯೊಳಗೆ ನುಗ್ಗಿ ಬೆದರಿಸಿ ದರೋಡೆ ಮಾಡುತ್ತಿದ್ದ ಗ್ಯಾಂಗ್ ಪೊಲೀಸರ ವಶ

By

Published : Nov 27, 2022, 3:21 PM IST

ರಾಯಚೂರು: ಮನೆಯೊಳಗೆ ನುಗ್ಗಿ ಬೆದರಿಸಿ ದರೋಡೆ ಮಾಡುತ್ತಿದ್ದ ಅಂತಾರಾಜ್ಯ ದರೋಡೆಕೋರರ ಖತರ್ನಾಕ್ ಗ್ಯಾಂಗ್ ಹೆಡೆಮುರಿ ಕಟ್ಟುವಲ್ಲಿ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಆಂಧ್ರಪ್ರದೇಶ ಮೂಲದ ನರಸಾಪುರಂ ತಾಲೂಕಿನ ಕೊಂಡಲಂನ ಆರ್ದಾನಿ ಲಕ್ಷ್ಮಣ ಅಲಿಯಾಸ್ ನಿಬ್ಬಾ, ಅಬ್ದುಲ್ ರೆಹಮಾನ್, ಭೀಮಾವರಂ ರಾಯಿಲಂನ ನಿವಾಸಿ ರಾಮಕೃಷ್ಣ ರಾಜು ಅಲಿಯಾಸ್ ರಾಜು, ನರಸಾಪುರಂನ ಕುಮಾರ ರಾಜು ಅಲಿಯಾಸ್ ಕುಮಾರ್, ವಿಶಾಖಪಟ್ಟಣಂನ ಸುಜಾತ ಅಲಿಯಾಸ್ ನಿಹಾರಿಕಾ, ಹಾರಿಕಾ ಜೋಡುಪಲ್ಲಿ ಬಂಧಿತ ದರೋಡೆಕೋರರು.

ಬಂಧಿತ ಆರೋಪಿಗಳಿಂದ ಸುಮಾರು 26 ಲಕ್ಷ ಮೌಲ್ಯದ 520 ಗ್ರಾಂ. ಬಂಗಾರದ ಆಭರಣಗಳು ಹಾಗೂ 15 ಸಾವಿರ ರೂಪಾಯಿ ನಗದು ಹಣ ಹಾಗೂ ದರೋಡೆಗೆ ಬಳಕೆ ಮಾಡುತ್ತಿದ್ದ 1.50 ಲಕ್ಷ ಮೌಲ್ಯದ ಟಾಟಾ ಇಂಡಿಕಾ ಕಾರ್ ಹಾಗೂ 2 ಲಕ್ಷ ಮೌಲ್ಯದ ನಿಸ್ಸಾನ್ ಮೈಕ್ರಾ ಕಾರ್ ಅನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.

2022 ನ.7 ರಂದು ಸಿಂಧನೂರು ತಾಲೂಕಿನ ಗಾಂಧಿನಗರದಲ್ಲಿ ಭಾಸ್ಕರರಾವ್ ಎನ್ನುವ ಮನೆಗೆ ತಡರಾತ್ರಿ ನುಗ್ಗಿ ಮೂವರು ಅಪರಿಚಿತರಿಂದ ಪ್ಲಾಸ್ಟಿಕ್ ಪಿಸ್ತೂಲ್ ತೋರಿಸಿ ಕೊಲೆ ಮಾಡುವುದಾಗಿ ಬೆದರಿಸಿ, ಮನೆಯಲ್ಲಿದ್ದ ಸುಮಾರು 18 ಲಕ್ಷ ರೂಪಾಯಿ ನಗದು ಹಣ, 6 ಲಕ್ಷ 75 ಸಾವಿರ ಮೌಲ್ಯದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಆರೋಪಿಗಳು ಪರಾರಿಯಾಗಿದ್ದಾರೆ. ಈ ಬಗ್ಗೆ ತುರುವಿಹಾಳ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.

ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿ: ದೂರಿನ ಆಧಾರದ ಮೇಲೆ ವಿಶೇಷ ತನಿಖೆ ತಂಡ ರಚನೆ ಮಾಡಲಾಗಿತ್ತು. ಈ ತನಿಖೆ ಯಶಸ್ವಿ ಕಾರ್ಯಾಚರಣೆಯಿಂದ ಓರ್ವ ಮಹಿಳೆ ಸೇರಿದಂತೆ ನಾಲ್ವರು ಅಂತರರಾಜ್ಯ ದರೋಡೆಕೋರರನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.

ಬಂಧಿತ ಗ್ಯಾಂಗ್​ನ ಮಹಿಳೆ ಆರೋಪಿ ಸುಜಾತ ಸಿಂಧನೂರು ನಗರದ ಆದರ್ಶ ಕಾಲೋನಿ, ಮಾನವಿ ಪಟ್ಟಣ ಹಾಗೂ ರಾಯಚೂರು ನಗರದಲ್ಲಿ ಮನೆ ಮಾಡಿಕೊಂಡು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡು, ತನಗೆ ಸಂಪರ್ಕದಲ್ಲಿರುವ ಜನರ ಹಾಗೂ ದೊಡ್ಡ ದೊಡ್ಡ ಮನೆಗಳನ್ನು ಪಟ್ಟಿ ಮಾಡಿಕೊಂಡು ಅವರ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಳು.

ಹಿರಿಯ ಅಧಿಕಾರಿಗಳು ಮೆಚ್ಚುಗೆ: ಇವರ ಮನೆಗೆ ಕಳ್ಳತನ ಹಾಕಲು ಸಂಪರ್ಕಿಸುವ ರಸ್ತೆ ಹಾಗೂ ಸುತ್ತಮುತ್ತಲು ಅಳವಡಿಸಿರುವ ಸಿಸಿ ಕ್ಯಾಮರಾ ಸೇರಿದಂತೆ ಸಂಪೂರ್ಣವಾದ ವಿವರವನ್ನು ತನ್ನ ಗ್ಯಾಂಗ್ ಮೂವರಿಗೆ ನಕಾಶೆ ತಯಾರಿಸಿ ನೀಡುತ್ತಿದ್ದಳು. ಅಲ್ಲದೇ ಸಿಂಧನೂರು, ಮಾನವಿಯಲ್ಲಿರುವ ಶ್ರೀಮಂತ ಜನರ ಪಟ್ಟಿ ಮಾಡಿಕೊಂಡು ಮನೆಗಳಿಗೆ ದರೋಡೆ ಮಾಡುವುದಕ್ಕೆ ಸಂಚು ರೂಪಿಸಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ತಂಡದ ಕಾರ್ಯಾಚರಣೆಗೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಬಹುಮಾನ ಘೋಷಣೆ ಮಾಡಿದ್ದಾರೆ.

ಓದಿ:ಮೋಜು, ಮಸ್ತಿಗಾಗಿ ಕಳ್ಳತನಕ್ಕಿಳಿದ ಇಬ್ಬರು ಆರೋಪಿಗಳ ಬಂಧನ

ABOUT THE AUTHOR

...view details