ರಾಯಚೂರು: ನಗರದ ಹೊರವಲಯದಲ್ಲಿರುವ ಮನ್ಸಲಾಪುರ ಗ್ರಾಮದ ಕೆರೆಗೆ ವಿಷಪೂರಿತ ಕೆಮಿಕಲ್ ನೀರನ್ನು ಬಿಡುತ್ತಿದ್ದ ಲಾರಿಯನ್ನು ಗ್ರಾಮಸ್ಥರು ವಶಕ್ಕೆ ಪಡೆದಿದ್ದಾರೆ.
ಕೆರೆಗೆ ವಿಷಪೂರಿತ ಕೆಮಿಕಲ್ ನೀರು.. ಲಾರಿ ವಶಕ್ಕೆ ಪಡೆದ ಗ್ರಾಮಸ್ಥರು - ರಾಯಚೂರು ಸುದ್ದಿ
ರಾಯಚೂರು ನಗರದ ಹೊರವಲಯದಲ್ಲಿರುವ ಮನ್ಸಲಾಪುರ ಗ್ರಾಮದ ಕೆರೆಗೆ ವಿಷಪೂರಿತ ಕೆಮಿಕಲ್ ನೀರನ್ನು ಬಿಡುತ್ತಿದ್ದ ಲಾರಿಯನ್ನು ಗ್ರಾಮಸ್ಥರು ವಶಕ್ಕೆ ಪಡೆದಿದ್ದು, ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ.
![ಕೆರೆಗೆ ವಿಷಪೂರಿತ ಕೆಮಿಕಲ್ ನೀರು.. ಲಾರಿ ವಶಕ್ಕೆ ಪಡೆದ ಗ್ರಾಮಸ್ಥರು Poisonous chemical water in the lake](https://etvbharatimages.akamaized.net/etvbharat/prod-images/768-512-8181118-956-8181118-1595765393758.jpg)
ಕೆರೆಗೆ ವಿಷಪೂರಿತ ಕೆಮಿಕಲ್ ನೀರು..ಲಾರಿ ವಶಕ್ಕೆ ಪಡೆದ ಗ್ರಾಮಸ್ಥರು
ಕೆರೆಗೆ ವಿಷಪೂರಿತ ಕೆಮಿಕಲ್ ನೀರು..ಲಾರಿ ವಶಕ್ಕೆ ಪಡೆದ ಗ್ರಾಮಸ್ಥರು
ಕೈಗಾರಿಕಾ ವಲಯದಿಂದ ರಾತ್ರೋರಾತ್ರಿ ಈ ರೀತಿ ಕೆಮಿಕಲ್ ನೀರನ್ನು ಕೆರೆಗೆ ಹರಿಸಲಾಗುತ್ತಿತ್ತು. ಇದರಿಂದ ಜಲಚರಗಳು ಮೃತಪಟ್ಟು, ಬೆಳೆಗೆ ಹರಿಸಿದರೆ ಬೆಳೆಯೆಲ್ಲ ಸುಟ್ಟು ಹೋಗುತ್ತಿತ್ತು. ಗ್ರಾಮಸ್ಥರಿಗೆ ಕಳೆದ ರಾತ್ರಿ ಕೆಮಿಕಲ್ ಸಾಗಿಸುತ್ತಿದ್ದ ಲಾರಿ ಸಿಕ್ಕಿದ್ದು, ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಹೀಗಾಗಿ ಕೂಡಲೇ ತನಿಖೆ ನಡೆಸಿ ರಾಸಾಯನಿಕವನ್ನು ಅವೈಜ್ಞಾನಿಕ ವಿಲೇವಾರಿ ಮಾಡುತ್ತಿದ್ದ ಕಂಪನಿಯನ್ನು ಸೀಜ್ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ರಾಯಚೂರು ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
Last Updated : Jul 26, 2020, 10:50 PM IST