ಕರ್ನಾಟಕ

karnataka

ETV Bharat / state

ರಾಯಚೂರು: ಬಾಲಕಿಗೆ ಬಿಯರ್ ಕುಡಿಸಿ ದೈಹಿಕ ಕಿರುಕುಳ..ಪ್ರಕರಣ ದಾಖಲು - ಸಿಂಧನೂರು ನಗರ ಠಾಣೆ

ಸಿಂಧನೂರು ಮೂಲದ ಯುವಕರು 29 ರಂದು ಹೊಸಪೇಟೆಯಿಂದ ಬಾಲಕಿಯನ್ನು ಕಾರಿನೊಳಗೆ ಕರೆದುಕೊಂಡು ಹೋಗಿ ಹೊಸಪೇಟೆ ಡ್ಯಾಂ, ಅಂಜನಾದ್ರಿ ಬೆಟ್ಟ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೋಗಿ ಸುತ್ತಾಡಿಸಿ, ಬಿಯರ್ ಕುಡಿಸಿ, ದೈಹಿಕವಾಗಿ ಕಿರುಕುಳ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಸಿಂಧನೂರು ನಗರ ಪೊಲೀಸ್​ ಠಾಣೆ
ಸಿಂಧನೂರು ನಗರ ಪೊಲೀಸ್​ ಠಾಣೆ

By

Published : Dec 2, 2022, 7:36 PM IST

ರಾಯಚೂರು: ಬಾಲಕಿಯನ್ನು ಬಿಯರ್ ಕುಡಿಸಿ, ದೈಹಿಕವಾಗಿ ಕಿರುಕುಳ ನೀಡಿರುವ ಪ್ರಕರಣ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಸಿಂಧನೂರು ಮೂಲದ ಯುವಕರು 29 ರಂದು ಹೊಸಪೇಟೆಯಿಂದ ಬಾಲಕಿಯನ್ನು ಕಾರಿನೊಳಗೆ ಕರೆದುಕೊಂಡು ಹೋಗಿ ಹೊಸಪೇಟೆ ಡ್ಯಾಂ, ಅಂಜನಾದ್ರಿ ಬೆಟ್ಟ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೋಗಿ ಸುತ್ತಾಡಿಸಿ, ಬಿಯರ್ ಕುಡಿಸಿ, ದೈಹಿಕವಾಗಿ ಕಿರುಕುಳ ನೀಡಲಾಗಿದೆ ಎಂದು ಬಾಲಕಿಯ ತಾಯಿ ದೂರಿದ್ದಾಳೆ.

ತಾಯಿ ನೀಡಿದ ದೂರಿನ ಹಿನ್ನಲೆ ಆರೋಪಿತರ ವಿರುದ್ದ ಕಲಂ 363 ಐಪಿಸಿ ಹಾಗೂ 8, 12 ಪೋಕ್ಸೋ ಮೊಕದ್ದಮೆಯನ್ನು ದಾಖಲಿಸಲಾಗಿದೆ. ಅಲ್ಲದೇ ಆರೋಪಿತರನ್ನು ಸೇರಿ ಹಿಡಿಯಲು ಪೊಲೀಸರು ಶೋಧ ನಡೆಸಿದ್ದಾರೆ. ಸಿಂಧನೂರು ನಗರ ಠಾಣೆಯಲ್ಲಿ ಕಳೆದ ಡಿ. 1ರಂದು ಪ್ರಕರಣ ದಾಖಲಾಗಿದೆ.

ಓದಿ:ಹುಡುಗಿಗೆ ಕಿರುಕುಳ ಆರೋಪ: ಯುವಕನಿಗೆ ಥಳಿಸಿದ ಜನ.. ವಿಡಿಯೋ

ABOUT THE AUTHOR

...view details