ಲಿಂಗಸುಗೂರು (ರಾಯಚೂರು):ಹಳೆ ದ್ವೇಷದ ಹಿನ್ನೆಲೆ ವ್ಯಕ್ತಿಯೋರ್ವನನ್ನು ಸಂಬಂಧಿಕರೇ ಕೊಲೆ ಮಾಡಿ ಮರಕ್ಕೆ ನೇಣು ಹಾಕಲಾಗಿದ್ದು ಈ ಬಗ್ಗೆ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿಯನ್ನು ಕೊಲೆ ಮಾಡಿ ಮರಕ್ಕೆ ನೇಣು ಹಾಕಿದ ದುಷ್ಕರ್ಮಿಗಳು..ಪ್ರಕರಣ ದಾಖಲು - ಲಿಂಗಸುಗೂರಿನಲ್ಲಿ ಹಳೆ ದ್ವೇಷ ಕೊಲೆಯಲ್ಲಿ ಅಂತ್ಯ
ಹಳೆಯ ದ್ವೇಷದಿಂದ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ಮರಕ್ಕೆ ನೇಣು ಹಾಕಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ನಡೆದಿದೆ.
ವ್ಯಕ್ತಿ ಕೊಲೆ
ಜಿಲ್ಲೆಯ ಲಿಂಗಸುಗೂರು ತಾಲೂಕಿನ ರಾಮಲೂಟಿ ಜಮೀನೊಂದರಲ್ಲಿ ಮುತ್ತಪ್ಪ (24) ಎಂಬಾತನನ್ನು ಕೊಲೆ ಮಾಡಿ ನಂತರ ಮರಕ್ಕೆ ನೇಣು ಹಾಕಲಾಗಿದೆ. ಮೃತನ ಸಂಬಂಧಿಕರಾದ ದೇವದುರ್ಗ ತಾಲೂಕಿನ ಗಾಲದಿನ್ನಿ ಗ್ರಾಮದ ಮುದ್ದಪ್ಪ ಎಣ್ಣೇರ, ರೆಡ್ಡಿ ಎಣ್ಣೇರ ಹಾಗೂ ಐದಭಾವಿಯ ನಿಂಗಪ್ಪ, ಶೇಖರಪ್ಪ ಎಂಬುವರೇ ನನ್ನ ಮಗನನ್ನು ಕೊಲೆ ಮಾಡಿ ಈ ರೀತಿ ಮರಕ್ಕೆ ನೇಣು ಹಾಕಿದ್ದಾರೆ ಎಂದು ಮೃತನ ತಂದೆ ಅಯ್ಯಾಳಪ್ಪ ದೂರು ನೀಡಿದ್ದಾರೆ. ಈ ಬಗ್ಗೆ ಲಿಂಗಸುಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Last Updated : May 5, 2020, 6:39 PM IST