ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಪಲಗಲದಿನ್ನಿ ಗ್ರಾಮದ ನಾರಾಯಣಪುರ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ತಂದೆ ಮತ್ತು ಮಗು ನೀರುಪಾಲಾದ ಘಟನೆಯಲ್ಲಿ ಮೃತ ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತದೇಹ ಪತ್ತೆಯಾಗುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಮೂರು ವರ್ಷದ ಮಗು ಲಕ್ಕಪ್ಪ ಹಾಗೂ ತಂದೆ ರಮೇಶ್ (35) ಗುರುವಾರ ನೀರುಪಾಲಾಗಿದ್ದರು. ಮಗುವಿನ ಮೃತದೇಹ ಅಂದೇ ಪತ್ತೆಯಾಗಿತ್ತು. ರಮೇಶ್ ಪತ್ನಿ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ವೇಳೆ ಅಲ್ಲಿಯೇ ಆಟವಾಡುತ್ತಿದ್ದ ಮಗು ಕಾಲು ಜಾರಿ ನೀರಿಗೆ ಬಿದ್ದಿತ್ತು. ಆಗ ಹಿನ್ನೀರಿನಲ್ಲಿ ಮೀನು ಹಿಡಿಯುತ್ತಿದ್ದ ತಂದೆ ಆತುರವಾಗಿ ಬರುವಾಗ ಹರಗೋಲು ಪಲ್ಟಿ ಹೊಡೆದು ನೀರಿನಲ್ಲಿ ಮುಳುಗಿದ್ದರು.