ಕರ್ನಾಟಕ

karnataka

ETV Bharat / state

ತರಕಾರಿ ಖರೀದಿಗೆ ಮುಗಿಬಿದ್ದ ರಾಯಚೂರಿಗರು.. - Lockdown

ನಗರದ ಎಂ.ಈರಣ್ಣ ಸರ್ಕಲ್ ಬಳಿಯ ತರಕಾರಿ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದನ್ನು ಮರೆತು ತರಕಾರಿ‌ ಖರೀದಿಸುವಲ್ಲಿ ಜನರು ನಿರತರಾಗಿದ್ದರು..

buying vegetables
ತರಕಾರಿ ಖರೀದಿಯ ಬರದಲ್ಲಿರುವ ಜನರು

By

Published : Jul 18, 2020, 6:01 PM IST

ರಾಯಚೂರು :ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆ ರಾಯಚೂರು, ಸಿಂಧನೂರು ನಗರಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಿದ ಪರಿಣಾಮ ಅಗತ್ಯ ವಸ್ತುಗಳ ಹಾಗೂ ತರಕಾರಿ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.

ತರಕಾರಿ ಖರೀದಿಯ ಬರದಲ್ಲಿರುವ ಜನರು

ನಗರದ ಎಂ.ಈರಣ್ಣ ಸರ್ಕಲ್ ಬಳಿಯ ತರಕಾರಿ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದನ್ನು ಮರೆತು ತರಕಾರಿ‌ ಖರೀದಿಸುವಲ್ಲಿ ಜನರು ನಿರತರಾಗಿದ್ದರು. ನಗರದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆ, ಲಾಕ್‌ಡೌನ್ ಮಾಡಲಾಗಿದೆ. ಆದರೆ, ಇದರ ನಿಯಮಗಳನ್ನ ಪಾಲನೆ ಮಾಡುವಲ್ಲಿ ಜನರು ವಿಫಲರಾಗುತ್ತಿದ್ದಾರೆ ಎಂದು ಕೆಲ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.

ರಾಯಚೂರು, ಸಿಂಧನೂರು ನಗರಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಿದ್ದು, ಕಡ್ಡಾಯವಾಗಿ ನಿಯಮ ಪಾಲಿಸುವಂತೆ ಜಿಲ್ಲಾಡಳಿತ ಹಾಗೂ ಪೊಲೀಸ್​ ಇಲಾಖೆ ತಿಳಿಸಿದೆ.

ABOUT THE AUTHOR

...view details