ರಾಯಚೂರು: ಲಾಕ್ಡೌನ್ ನಡುವೆಯೇ ಇಲ್ಲಿನ ಲಿಂಗಸುಗೂರು ಬಳಿ ಬ್ಯಾಂಕ್ ಮುಂದೆ ಜನಜಂಗುಳಿಯೇ ಏರ್ಪಟ್ಟಿತ್ತು. ಲಾಕ್ಡೌನ್ ಹಿನ್ನೆಲೆ ಪ್ರಧಾನಮಂತ್ರಿ ಜನ್-ಧನ್ ಖಾತೆಗೆ ಸಹಾಯ ಧನವಾಗಿ 500 ರೂಪಾಯಿ ಹಾಕಲಾಗಿದೆ. ಈ ಹಿನ್ನೆಲೆ ತಾಲೂಕಿನ ವಿವಿಧ ಬ್ಯಾಂಕ್ಗಳ ಮುಂದೆ ಗ್ರಾಹಕರು ಸಾಲುಗಟ್ಟಿ ನಿಂತಿದ್ದಾರೆ.
ಜನ್‌ಧನ್ ಖಾತೆಗೆ ಹಣ ಸಂದಾಯ: ಬ್ಯಾಂಕ್ ಮುಂದೆ ಜನರ ನೂಕುನುಗ್ಗಲು - ಸ್ವಸಹಾಯ ಗುಂಪು,
ಲಾಕ್ಡೌನ್ ಹಿನ್ನೆಲೆ ಕೆಲಸವಿಲ್ಲದೆ ಜನತೆ ತೀವ್ರ ಕಂಗಾಲಾಗಿದ್ದಾರೆ. ಈ ಹಿನ್ನೆಲೆ ಪ್ರಧಾನ ಮಂತ್ರಿ ಜನ್‌ಧನ್ ಖಾತೆಗೆ 500 ರೂಪಾಯಿ ಜಮಾ ಮಾಡಲಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ರಾಯಚೂರಿನ ವಿವಿಧೆಡೆ ಬ್ಯಾಂಕ್ಗಳ ಮುಂದೆ ಜನಸಂದಣಿ ಏರ್ಪಟ್ಟಿತ್ತು.
ಜನ್-ಧನ್ ಖಾತೆಗೆ ಹಣ ಸಂದಾಯ: ಬ್ಯಾಂಕ್ ಮುಂದೆ ಜನರ ನೂಕುನುಗ್ಗಲು
ಪ್ರಧಾನಮಂತ್ರಿ ಜನ್-ಧನ್ ಯೋಜನೆ ಜೊತೆಗೆ ವಿವಿಧ ಯೋಜನೆಗಳಡಿ ಮಾಶಾಸನ ಪಡೆಯುವ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಮೂರು ತಿಂಗಳ ಹಣ ಪಾವತಿಸಲಾಗಿದೆ. ಸ್ವಸಹಾಯ ಗುಂಪು, ಕಿಸಾನ್ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಹಣ ಪಲಾನುಭವಿಗಳ ಖಾತೆಗೆ ಜಮೆ ಅಗಿದ್ದರಿಂದ ಬಹುತೇಕ ಬ್ಯಾಂಕ್ಗಳ ಮುಂದೆ ತಂಡೋಪ ತಂಡವಾಗಿ ಜನತೆ ಜಮಾವಣೆ ಆಗಿದ್ದಾರೆ.
ಈ ವೇಳೆ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಡಿವೈಎಸ್ಪಿ ಎಸ್. ಹುಲ್ಲೂರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಜನರಿಗೆ ತಿಳಿಹೇಳಿದ್ದಾರೆ.