ಕರ್ನಾಟಕ

karnataka

ETV Bharat / state

ರಾಯಚೂರಿಗೂ, ಪೇಜಾವರ ಶ್ರೀಗಳಿಗೂ 6 ದಶಕದ ನಂಟು - ಮುಖ್ಯಮಂತ್ರಿ ಜೆ.ಎಚ್.ಪಟೇಲ್

ಅಗಲಿದ ದಾರ್ಶನಿಕ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರಿಗೂ ರಾಯಚೂರು ಜಿಲ್ಲೆಗೂ ಅವಿನಾಭಾವ ಸಂಬಂಧವಿತ್ತು.

pejavara mutt vishweshwara swamiji death
ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ

By

Published : Dec 30, 2019, 11:53 AM IST

ರಾಯಚೂರು:ಅಗಲಿದ ಸಂತಶ್ರೇಷ್ಠ, ದಾರ್ಶನಿಕ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರಿಗೂ ರಾಯಚೂರು ಜಿಲ್ಲೆಗೂ ಅವಿನಾಭಾವ ಸಂಬಂಧವಿತ್ತು. ಶ್ರೀಗಳು 6 ದಶಕಕ್ಕೂ ಅಧಿಕ ಕಾಲ ಜಿಲ್ಲೆಯೊಂದಿಗೆ ಒಡನಾಟ ಇಟ್ಟುಕೊಂಡಿದ್ದರು.

1950ರಲ್ಲಿ ಗುರುಗಳಾಗಿದ್ದ ಉಡುಪಿಯ ವಿದ್ಯಾಮಾನ್ಯ ತೀರ್ಥರೊಂದಿಗೆ ಪೇಜಾವರ ಶ್ರೀಗಳು ಪ್ರಥಮ ಬಾರಿಗೆ ಆಗಮಿಸಿದ್ದರು. ಬಳಿಕ 1980 ರಿಂದ ಪ್ರತಿವರ್ಷ ಜನವರಿಯಲ್ಲಿ ಜಿಲ್ಲೆಗೆ ಬರುತ್ತಿದ್ದರು. ಪರ್ಯಾಯ ಕೈಗೊಳ್ಳುವ ಮುನ್ನ ಜಿಲ್ಲೆಯಲ್ಲಿ ಸಂಚರಿಸಿ ಭಕ್ತರಿಂದ ದವಸ ಧಾನ್ಯ ಸ್ವೀಕರಿಸುತ್ತಿದ್ದರು. ಅದು ಪ್ರತಿ ವರ್ಷ 200 ಕ್ವಿಂಟಾಲಿಗೂ ಹೆಚ್ಚು ಶೇಖರಣೆಯಾಗುತ್ತಿತ್ತು.

ವಿಶ್ವೇಶ ತೀರ್ಥ ಸ್ವಾಮೀಜಿ

ಇಲ್ಲಿಗೆ ಶ್ರೀಗಳು ಆಗಮಿಸಿದಾಗ ಶ್ರೀಗಳ ಪರಮ ಭಕ್ತರಾದ ನರಸಿಂಗರಾವ್ ದೇಶಪಾಂಡೆ ಅವರ ಮನೆಯಲ್ಲಿ ತಂಗುತ್ತಿದ್ದರು. ಅವರಿಗಾಗಿಯೇ ಮನೆಯೊಂದನ್ನು ನಿರ್ಮಾಣ ಮಾಡಲಾಗಿತ್ತು.

ವಿದ್ಯಾರ್ಥಿಗಳ ಮೇಲಿನ ವಿಶೇಷ ಕಾಳಜಿಯಿಂದಾಗಿ ಶ್ರೀಗಳು ಅಖಿಲ ಭಾರತ ವಿಶ್ವಮಧ್ಯ ಮಹಾಮಂಡಳಿಯಿಂದ 1962ರಲ್ಲಿ ಬಾಡಿಗೆ ಕಟ್ಟಡದಲ್ಲಿ ರಾಘವೇಂದ್ರ ವಿದ್ಯಾರ್ಥಿ ನಿಲಯ ಪ್ರಾರಂಭಿಸಿದ್ದರು. ಮೊದಲು ಬಾಡಿಗೆ ಕಟ್ಟದಲ್ಲಿದ್ದ ವಿದ್ಯಾರ್ಥಿ ನಿಲಯವನ್ನು 1964ರಲ್ಲಿ ಎಲ್​​ವಿಡಿ ಕಾಲೇಜಿನ ಹತ್ತಿರದಲ್ಲಿ ಸ್ವಂತ ಕಟ್ಟಡ ನಿರ್ಮಿಸಿದರು. 2013ರಲ್ಲಿ ತತ್ವಜ್ಞಾನ ಸಮ್ಮೇಳನ ಹಾಗೂ ವಿದ್ಯಾರ್ಥಿಗಳ ಸುಧಾಮಂಗಳ ಕಾರ್ಯಕ್ರಮವನ್ನು ಯಾದವ್ ಸಮಾಜದ ಕೃಷ್ಣ ದೇವಸ್ಥಾನದಲ್ಲಿ ಪೇಜಾವರ ಮಠದಿಂದ ನಡೆಸಲಾಗಿತ್ತು.

ರಾಯಚೂರಿಗೆ ಆಗಮಿಸಿದ್ದ ಪೇಜಾವರ ಶ್ರೀ: ರಾಯಚೂರು ಜಿಲ್ಲೆಯಲ್ಲಿ ಶ್ರೀಗಳ ಹೆಜ್ಜೆಗುರುತು

ಕಳೆದ ಡಿ.14ರಿಂದ ನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆದ ಶ್ರೀಮನ್ಯಾಯಸುಧಾ ಮಂಗಳ ಮಹೋತ್ಸವ ಕಾರ್ಯಕ್ರಮದಲ್ಲಿ ಶ್ರೀಗಳು ಪಾಲ್ಗೊಂಡಿದ್ದರು. ಆಗಲೂ ಲವಲವಿಕೆಯಲ್ಲೇ ಇದ್ದ ಶ್ರೀಗಳು ಎಲ್ಲರಿಗೂ ದರ್ಶನ ನೀಡಿದ್ರು.

ರಾಯಚೂರು ನಗರದಲ್ಲಿ ಮುಂಗ್ಲಿ ಪ್ರಾಣದೇವರ ದೇವಾಲಯದ ಆವರಣದಲ್ಲಿ ಶ್ರೀಗಳಿಗೆ ಭಕ್ತರು ರಜತ ತುಲಾಭಾರ ಸೇವೆ ನೆರವೇರಿಸಿದ್ದರು. 1997ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಂ.ಎಸ್. ಪಾಟೀಲ್ ನೇತೃತ್ವದಲ್ಲಿ ಶ್ರೀಗಳಿಗೆ ರಜತ ತುಲಾಭಾರ ಸೇವೆ ನಡೆಸಲಾಗಿತ್ತು.

1997ರಲ್ಲಿ ನಗರದ ಹೊರವಲಯದ ತುಂಟಾಪುರ ಬಳಿ ಶ್ರೀಗಳು ಚಲಿಸುತ್ತಿದ್ದ ವೇಳೆ ಕಾರು ರಸ್ತೆ ಅಪಘಾತಕ್ಕೀಡಾಗಿತ್ತು. ಆಗ ಶ್ರೀಗಳು ಪ್ರಾಣಾಪಾಯದಿಂದ ಪಾರಾಗಿದ್ದರು. ಇಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಪಾಲ್ಗೊಂಡಿದ್ರು. ಅಪಘಾತದವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಎಸ್. ಪಾಟೀಲ್ ಅವರು ಆಗಿನ ಮುಖ್ಯಮಂತ್ರಿ ಜೆ.ಹೆಚ್. ಪಟೇಲ್ ಗಮನಕ್ಕೆ ತಂದು ಹೆಲಿಕಾಪ್ಟರ್ ಕಳುಹಿಸಲು ಕೋರಿದ್ದರು. ಅದರಂತೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿನ ಅಪೊಲೊ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು.

ABOUT THE AUTHOR

...view details