ಕರ್ನಾಟಕ

karnataka

ETV Bharat / state

ಕೋತಿಗಳ ಕಾಟಕ್ಕೆ ಬೇಸತ್ತ ರಾಯಚೂರಿನ ರಿಮ್ಸ್ ಆಸ್ಪತ್ರೆ ರೋಗಿಗಳು: ಸೂಕ್ತ ಕ್ರಮಕ್ಕೆ ಒತ್ತಾಯ - ಆಸ್ಪತ್ರೆಯಲ್ಲಿ ಕೋತಿಗಳ ಕಾಟ

ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಪ್ರತಿನಿತ್ಯ ನೂರಾರು ಜನ ಚಿಕಿತ್ಸೆಗೆಂದು ಬರುತ್ತಾರೆ. ಬಂದ ರೋಗಿಗಳಿಗೆ ಚಿಕಿತ್ಸೆ ಸಿಗುತ್ತದೆಯಾದರೂ ಆಸ್ಪತ್ರೆಯ ಒಳಗೆ ಎಂಟ್ರಿ ಕೊಡುವ ಕೋತಿಗಳು ರೋಗಿಗಳ ಮೇಲೆ ದಾಳಿ ಮಾಡುವ ಆತಂಕ ಉಂಟಾಗಿದೆ.

monkeys
ಕೋತಿಗಳ ಕಾಟಕ್ಕೆ ಬೇಸತ್ತ ರಾಯಚೂರಿನ ರಿಮ್ಸ್ ಆಸ್ಪತ್ರೆಯ ರೋಗಿಗಳು

By

Published : Jun 7, 2023, 11:17 AM IST

Updated : Jun 7, 2023, 12:28 PM IST

ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಕೋತಿಗಳ ಕಾಟ

ರಾಯಚೂರು : ಅದು ಬಡ ರೋಗಿಗಳು ಬರುವ ಆಸ್ಪತ್ರೆ. ಆಸ್ಪತ್ರೆಗೆ ಬಂದವರಿಗೆ ನಿರ್ಭಿತಿಯಿಂದ ಚಿಕಿತ್ಸೆ ದೊರೆಯುವ ವ್ಯವಸ್ಥೆ ಇರಬೇಕು. ಆದರೆ, ಆಸ್ಪತ್ರೆಯ ಆವರಣದಲ್ಲಿ ಹಾಗೂ ಒಳಗಡೆ ರೋಗಿಗಳ ಮೇಲೆ ಕೋತಿಗಳು ಹಲ್ಲೆ ಮಾಡುವ ಭೀತಿ ಎದುರಾಗಿದ್ದು, ಕಪಿಚೇಷ್ಠೆಯಿಂದ ಜನ ತೊಂದರೆ ಅನುಭವಿಸುವಂತಾಗಿದೆ.

ಹೌದು, ನಗರದ ಹೊರವಲಯದಲ್ಲಿರುವ ರಿಮ್ಸ್ ಆಸ್ಪತ್ರೆಗೆ ರಾಯಚೂರು ಜಿಲ್ಲೆಯ ವಿವಿಧ ತಾಲೂಕುಗಳು ಸೇರಿದಂತೆ ಪಕ್ಕದ ಯಾದಗಿರಿ ಜಿಲ್ಲೆಯ ರೋಗಿಗಳು ಆಗಮಿಸುತ್ತಾರೆ. ಚಿಕಿತ್ಸೆಗೆ ಎಂದು ದಾಖಲಾಗಿರುವ ಒಳರೋಗಿಗಳು ಊಟ, ತಿಂಡಿ, ಬ್ರೆಡ್, ಬಿಸ್ಕಟ್ ಸೇರಿದಂತೆ ತಿಂಡಿಗಳನ್ನು ತರುತ್ತಾರೆ. ಇದನ್ನು ನೋಡಿರುವ ಕೋತಿಗಳು ಆಸ್ಪತ್ರೆ ಒಳಗಡೆ ಬಂದು, ಊಟ-ತಿಂಡಿಗಳನ್ನು ತೆಗೆದುಕೊಂಡು ಹೋಗುತ್ತಿವೆ. ಕೋತಿಗಳ ಕಾಟದಿಂದ ಜನ ಸಾಕಷ್ಟು ತೊಂದರೆ ಅನುಭವಿಸುವಂತಾಗಿದ್ದು, ಭಯದ ಭೀತಿ ನಿರ್ಮಾಣವಾಗಿದೆ.

ಇದನ್ನೂ ಓದಿ :ಮಥುರಾದಲ್ಲಿ ಸನ್ಯಾಸಿಯ ಬಟ್ಟೆ ಹಿಡಿದು ಆಹಾರ ನೀಡುವಂತೆ ಕಾಡಿದ ಕೋತಿ..ವಿಡಿಯೋ ವೈರಲ್

" ಇತ್ತೀಚಿನ ದಿನಗಳಿಂದೇನು ಈ ಕೋತಿಗಳ ಕಾಟ ಪ್ರಾರಂಭವಾಗಿಲ್ಲ, ಇದಕ್ಕೂ ಮೊದಲಿನಿಂದ ಮಂಗಗಳು ಆಸ್ಪತ್ರೆಯ ಒಳಗಡೆ ಪ್ರವೇಶ ಮಾಡುತ್ತಿದ್ದವು. ಆದರೆ, ಆಡಳಿತ ಮಂಡಳಿ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಪರಿಣಾಮ, ರೋಗಿಗೆ ತಂದಿಟ್ಟಿರುವ ಊಟ - ತಿಂಡಿ, ತಿನಸುಗಳನ್ನು ತಗೆದುಕೊಂಡು ಹೋಗುತ್ತಿವೆ. ಕೆಲವೊಮ್ಮ ಕೋತಿಗಳನ್ನು ಓಡಿಸಲು ಹೋದ್ರೆ ನಮ್ಮ ಮೈ ಮೇಲೆ ಬರುತ್ತವೆ " ಎಂದು ರೋಗಿಗಳು ಆರೋಪಿಸಿದ್ದಾರೆ.

ಇದನ್ನೂ ಓದಿ :ನಿತ್ಯ ಕೋತಿ ಉಪಟಳದಿಂದ ರೋಸಿಹೋದ ಕನ್ನೇರಿ ಜನ: ಕಾಳುಕಡಿ, ಕಾಫಿ ಬೀಜ ಮಂಗಗಳ ಪಾಲು

ಕೋತಿಗಳ ಕಾಟದ ಬಗ್ಗೆ ಆಸ್ಪತ್ರೆಯ ಅಧೀಕ್ಷರಿಗೆ ಕೇಳಿದ್ರೆ, " ಕೋತಿಗಳು ಜಾಸ್ತಿ ಇವೆ. ಪಟಾಕಿ ಹೊಡೆಯುವ ಮೂಲಕ ಅವುಗಳ ಹಾವಳಿ ತಪ್ಪಿಸುವ ಕೆಲಸ ಮಾಡುತ್ತಿದ್ದೇವೆ. ಈ ಕುರಿತು ಅರಣ್ಯ ಇಲಾಖೆಯವರಿಗೂ ತಿಳಿಸಿದ್ದೇವೆ. ಆದರೆ, ಅವರು ಬರುವುದಿಲ್ಲ. ಮೊದಲಿಗೆ ಕೋತಿಗಳು ಜಾಸ್ತಿ ಇದ್ದವು. ಈಗ ಪೂರ್ಣ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಹೇಳುವುದಿಲ್ಲ. ಆದರೆ, ಹತೋಟಿ ತರಲಾಗಿದೆ. ಕೋತಿಗಳ ಕಾಟ ತಪ್ಪಿಸುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಆಸ್ಪತ್ರೆಯ ಒಳಗೆ ಹಾಗೂ ಹೊರಗೆ ಕೋತಿಗಳು ಬರಲು ಮುಖ್ಯಕಾರಣ ಎಂದರೆ ರೋಗಿಗಳು ಊಟ, ತಿಂಡಿ, ತಿನಿಸುಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಇದನ್ನು ಕಂಡ ಕೋತಿಗಳು ಒಳಗಡೆ ಬರುತ್ತಿವೆ " ಎಂದು ಹೇಳಿದ್ದಾರೆ.

ಇದನ್ನೂ ಓದಿ :ತಾಯಿ ಬಿಟ್ಟೋಗಿದ್ದ ವೇಳೆ ಚಿಕಿತ್ಸೆ, ಆರೈಕೆ.. ಡಾಬಾ ಮಾಲೀಕನಿಗೆ ಅದೃಷ್ಟ ಲಕ್ಷ್ಮಿಯಾದ ಕೋತಿ ಮರಿ

" ರೋಗಿಗಳಿಗೆ ತೊಂದರೆಯಾಗದಂತೆ ಆಸ್ಪತ್ರೆಯ ವಾತಾವರಣವಿರಬೇಕು. ಆದರೆ, ಕಪಿಚೇಷ್ಠೆಯಿಂದ ರೋಗಿಗಳು ರೋಸಿ ಹೋಗುವಂತಾಗಿದ್ದು, ಅರಣ್ಯ ಇಲಾಖೆಯವರು ಕೋತಿಗಳ ಸೆರೆ ಹಿಡಿಯಬೇಕು. ಹಾಗೂ ಆಸ್ಪತ್ರೆ ಒಳಗಡೆ ಆಡಳಿತ ಮಂಡಳಿ ಕ್ರಮ ಕೈಗೊಳ್ಳಬೇಕು " ಎಂದು ಜನರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ :ಸಹ ಕೋತಿ ಸಾವಿಗೆ ಕಾರಣವೆಂದು ವ್ಯಕ್ತಿ ಮೇಲೆ ಮಂಗಗಳ ದಾಳಿ.. ವಿಡಿಯೋ ವೈರಲ್​

Last Updated : Jun 7, 2023, 12:28 PM IST

ABOUT THE AUTHOR

...view details