ರಾಯಚೂರು: ಆಸ್ಪತ್ರೆಯ ಮಹಡಿಯಿಂದ ಜಿಗಿದು ರೋಗಿಯೊಬ್ಬ ಮೃತಪಟ್ಟಿರುವ ಘಟನೆ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಜರುಗಿದೆ. ನಗರದ ಎಲ್‌ಬಿಎಸ್ ಬಡವಣೆ ನಿವಾಸಿ ತಾಹೀರ್ ಅಹ್ಮದ್(42) ಎಂಬಾತ ಮೃತಪಟ್ಟಿರುವ ರೋಗಿ.
ಕೂಲಿ ಮಾಡಿ ಜೀವನ ಮಾಡಿಕೊಂಡು ಬದುಕುತಿದ್ದ ತಾಹೀರ್ ಮದ್ಯ ಮದ್ಯದ ಚಟಕ್ಕೆ ಬಿದ್ದಿದ್ದ ಎನ್ನಲಾಗಿದೆ. ಈ ಕಾರಣಕ್ಕೆ ಮೊದಲ ಹೆಂಡತಿ ಡೈವೋರ್ಸ್ ಪಡೆದುಕೊಂಡಿದ್ದಳು. ನಂತರ ಈತ ಎರಡನೇ ವಿವಾಹ ಆಗಿದ್ದ. ಎರಡನೇ ಮದುವೆ ಬಳಿಕ ಮದ್ಯ ಸೇವನೆ ಇನ್ನೂ ಹೆಚ್ಚಾಗ ಮುಂದುವೆರೆಸಿದ್ದ. ಹೀಗಾಗಿ, ಆ ಹೆಂಡತಿ ಸಹ ಬಿಟ್ಟು ಹೋಗಿದ್ದಳು.