ಕರ್ನಾಟಕ

karnataka

ETV Bharat / state

ರಾಯಚೂರು ಐಐಐಟಿಗೆ ರಾಷ್ಟೀಯ ಸಂಸ್ಥೆಗಳ ಸ್ಥಾನಮಾನ ನೀಡುವ ವಿಧೇಯಕ ಅಂಗೀಕಾರ: ಡಿಸಿಎಂ ಸವದಿ ಅಭಿನಂದನೆ - ರಾಯಚೂರು ಐಐಐಟಿಗೆ ರಾಷ್ಟೀಯ ಸಂಸ್ಥೆಗಳ ಸ್ಥಾನಮಾನ

ರಾಯಚೂರು ಸೇರಿದಂತೆ ದೇಶದ 5 ಕಡೆಗಳಲ್ಲಿ ಕಾರ್ಯನಿರ್ವಹಿಸಲಿರುವ ಐಐಐಟಿಗಳಿಗೆ ರಾಷ್ಟ್ರೀಯ ಸಂಸ್ಥೆಗಳ ಸ್ಥಾನಮಾನ ನೀಡುವ ವಿಧೇಯಕ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ. ಇದರಿಂದ ರಾಯಚೂರಿನ ಐಐಐಟಿಯ ಹೆಚ್ಚಿನ ಚಟುವಟಿಕೆಗಳಿಗೆ ಚಾಲನೆ ಸಿಕ್ಕಂತಾಗಿದೆ.

Parliament passes IIIT amendment bill
ರಾಜ್ಯಸಭೆಯಲ್ಲಿ ಐಐಐಟಿ ತಿದ್ದುಪಡಿ ಕಾಯ್ದೆ ಅಂಗೀಕಾರ

By

Published : Sep 24, 2020, 11:52 AM IST

ಬೆಂಗಳೂರು:ರಾಯಚೂರಿನ ಇಂಡಿಯನ್ ಇನ್ಸಿಟ್ಯೂಟ್​ ಆಫ್​ ಇನ್ಫಾರ್ಮೇಶನ್​ ಟೆಕ್ನಾಲಜಿ (ಐಐಐಟಿ )ಗೆ ರಾಷ್ಟೀಯ ಸಂಸ್ಥೆಗಳ ಸ್ಥಾನಮಾನ ನೀಡುವ ವಿಧೇಯಕ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದ್ದು, ಡಿಸಿಎಂ ಲಕ್ಮಣ ಸವದಿ ಅಭಿನಂದನೆ ಸಲ್ಲಿಸಿದ್ದಾರೆ.

ರಾಯಚೂರು ಸೇರಿದಂತೆ ದೇಶದ 5 ಕಡೆಗಳಲ್ಲಿ ಕಾರ್ಯನಿರ್ವಹಿಸಲಿರುವ ಐಐಐಟಿಗಳಿಗೆ ರಾಷ್ಟ್ರೀಯ ಸಂಸ್ಥೆಗಳ ಸ್ಥಾನಮಾನ ನೀಡುವ ವಿಧೇಯಕ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ. ಇದರಿಂದ ರಾಯಚೂರಿನ ಐಐಐಟಿಯ ಹೆಚ್ಚಿನ ಚಟುವಟಿಕೆಗಳಿಗೆ ಚಾಲನೆ ಸಿಕ್ಕಂತಾಗಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಡಿಸಿಎಂ ಲಕ್ಷಣ ಸವದಿ, ರಾಯಚೂರಿನಲ್ಲಿ ಅತೀ ಶೀಘ್ರವಾಗಿ ಐಐಟಿ ಕಾರ್ಯಾರಂಭಿಸಬೇಕೆಂಬುದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಉದ್ದೇಶವಾಗಿತ್ತು. ಈ ನಿಟ್ಟಿನಲ್ಲಿ ಮಾರ್ಚ್​ನಲ್ಲೇ ಕಾನೂನು ( ತಿದ್ದುಪಡಿ) ಮಸೂದೆ ಲೋಕಸಭೆಯಲ್ಲಿ ಅಂಗೀಕರಿಸಲಾಗಿದ್ದು, ಇದೀಗ ರಾಜ್ಯಸಭೆಯಲ್ಲೂ ಅಂಗೀಕಾರವಾಗಿದೆ ಎಂದು ತಿಳಿಸಿದ್ದಾರೆ.

ಮಸೂದೆ ಅಂಗೀಕಾರವಾಗಿರುವುದರಿಂದ ರಾಯಚೂರಿನ ಐಐಐಟಿಗೆ ಕೇಂದ್ರಿಯ ಸಂಸ್ಥೆ ಸ್ಥಾನಮಾನ ಸಿಗಲಿದೆ. ಇದರಿಂದ ರಾಜ್ಯದ ಶೈಕ್ಷಣಿಕ ಕ್ಷೇತ್ರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಗೌರವ ಸಿಗಲಿದೆ. ಐಐಐಟಿಗಳಿಗೆ ಅಕಾಡೆಮಿಕ್​ ಪದವಿಯಿಂದ ಹಿಡಿದು ಪಿಹೆಚ್​​ಡಿವರೆಗೆ ವಿವಿಧ ಉನ್ನತ ಶಿಕ್ಷಣಗಳ ಪದವಿ ನೀಡುವ ಕಾನೂನುಬದ್ಧ ಅರ್ಹತೆಯು ಈ ಮಸೂದೆಯಿಂದ ಸಿಕ್ಕಂತಾಗಿದೆ ಎಂದಿದ್ದಾರೆ ಡಿಸಿಎಂ ಸವದಿ.‌

ABOUT THE AUTHOR

...view details