ರಾಯಚೂರು:ರಾಜ್ಯದೆಲ್ಲೆಡೆಸಮೃದ್ಧ ಮಳೆಯಾಗಲಿ ಎಂದು ಪ್ರಾರ್ಥಿಸಿ ಜಿಲ್ಲೆಯ ವಿರಗೋಟದ ಶ್ರೀ ಆದಿಮೌನಲಿಂಗೇಶ್ವರ ದೇವಾಲಯದಲ್ಲಿ 5 ದಿನಗಳ ಕಾಲ ವಿಶೇಷ ಪರ್ಜನ್ಯ ಹೋಮ ನಡೆಯುತ್ತಿದೆ.
ರಾಯಚೂರಿನಲ್ಲಿ ಮಳೆಗಾಗಿ 5 ದಿನಗಳ ಪರ್ಜನ್ಯ ಹೋಮ - viss,bytes and script
ರಾಯಚೂರಿನಲ್ಲಿ ಈ ವೇಳೆಗಾಗಲೇ ಮುಂಗಾರು ಮಳೆ ಸುರಿದು ಕೃಷಿ ಚಟುವಟಿಕೆಗಳು ಚುರುಕುಗೊಂಡಿರಬೇಕಿತ್ತು. ಆದ್ರೆ ಮಳೆರಾಯನ ಮುನಿಸಿನಿಂದ ಕೃಷಿ ಚಟುವಟಿಕೆಗಳು ತಟಸ್ಥಗೊಂಡು, ರೈತಾಪಿ ವರ್ಗವನ್ನ ಚಿಂತೆಗೀಡು ಮಾಡಿದೆ.
ದೇವಾಲಯದ ಪೀಠಾಧಿಪತಿ ಶ್ರೀ ಅಡವಿಲಿಂಗ ಮಹಾರಾಜರ ನೇತೃತ್ವದಲ್ಲಿ 5 ದಿನಗಳ ಕಾಲ ಪರ್ಜನ್ಯ ಯಾಗ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ವರುಣ ದೇವನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಕೃಷ್ಣತೀರದ ದೇವಾಲಯದ ಆವರಣದಲ್ಲಿ 108 ಅಗ್ನಿಕುಂಡಗಳನ್ನು ನಿರ್ಮಿಸಿ, 61 ಜನ ಪುರೋಹಿತರಿಂದ ಮಂತ್ರ ಘೋಷ, ವಿವಿಧ ಮಠಾಧೀಶರ ಉಪಸ್ಥಿತಿಯಲ್ಲಿ ಹೋಮ,ಪೂಜೆ ನೇರವೇರಿಸಲಾಗುತ್ತಿದೆ. ಮೂರನೇಯ ದಿನವಾದ ಇಂದು 432 ಜನ ದಂಪತಿಗಳು ಪರ್ಜನ್ಯ ಯಾಗ ನೇರವೇರಿಸಿ ಮಳೆಯಾಗಲಿ ಎಂದು ಪ್ರಾರ್ಥಿಸಿದ್ರು.
ಮಳೆ ಮತ್ತು ಲೋಕಕಲ್ಯಾಣಕ್ಕಾಗಿ ಏರ್ಪಡಿಸಿರುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ದೇವದುರ್ಗ ತಾಲೂಕು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು, ನೇರೆ ಜಿಲ್ಲೆಯ ಭಕ್ತರು ಭಾಗವಹಿಸುತ್ತಿದ್ದಾರೆ.
TAGGED:
viss,bytes and script