ರಾಯಚೂರು: ಕೊರೊನಾ ಹಿನ್ನೆಲೆ ಮಕ್ಕಳು ಮನೆಯಲ್ಲೆ ಇದ್ದು, ಪೋಷಕರು ಅವರನ್ನು ಕೂಲಿಗಾಗಿ ಜಮೀನುಗಳಿಗೆ ಕಳುಹಿಸುತ್ತಿದ್ದಾರೆ.
ಮಕ್ಕಳಿಗಿಲ್ಲ ಶಾಲೆ.. ಹತ್ತಿ ಬಿಡಿಸಲು ಕರೆದೊಯ್ಯುತ್ತಿರುವ ಪೋಷಕರು - ಮಕ್ಕಳನ್ನು ಕೂಲಿಗೆ ಕಲುಹಿಸುತ್ತಿರುವ ಪೋಷಕರು
ಹಲವಾರು ಬಾರಿ ಅಧಿಕಾರಿಗಳು ದಾಳಿ ನಡೆಸಿ ಎಚ್ಚರಿಕೆ ಕೊಟ್ಟಿದ್ದರೂ ಪೋಷಕರು ಮತ್ತೇ ತಮ್ಮ ಚಾಳಿ ಮುಂದುವರೆಸಿದ್ದಾರೆ..
ಹತ್ತಿ ಬಿಡಿಸಲು ಕರೆದೊಯ್ಯುತ್ತಿರುವ ಪೋಷಕರು
ಜಿಲ್ಲೆಯ ನಾನಾ ಕಡೆಗಳಲ್ಲಿ ಈ ದೃಶ್ಯ ಕಂಡು ಬರುತ್ತಿದೆ. ರಾಯಚೂರು ತಾಲೂಕಿನ ಉಡಮಗಲ್-ಖಾನಾಪುರ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮದಲ್ಲಿನ ಹೊಲಗಳಲ್ಲಿ ಮಕ್ಕಳು ಹತ್ತಿ ಬಿಡಿಸುತ್ತಿದ್ದಾರೆ. ಶಾಲೆಗಳು ಇಲ್ಲದ ಕಾರಣ ಬಡ ಪೋಷಕರು ತಮ್ಮ ಮಕ್ಕಳನ್ನ ಕೂಲಿ ಕೆಲಸಕ್ಕೆ ಕಳುಹಿಸುತ್ತಿದ್ದಾರೆ.
ಘಟನೆ ಸಂಬಂಧ ಹಲವಾರು ಬಾರಿ ಅಧಿಕಾರಿಗಳು ದಾಳಿ ನಡೆಸಿ ಎಚ್ಚರಿಕೆ ಕೊಟ್ಟಿದ್ದರೂ ಪೋಷಕರು ಮತ್ತೇ ತಮ್ಮ ಚಾಳಿ ಮುಂದುವರೆಸಿದ್ದಾರೆ.