ಕರ್ನಾಟಕ

karnataka

ETV Bharat / state

ರಾಯಚೂರಿನಲ್ಲಿ ಬಾವಿಗೆ ಬಿದ್ದಿದ್ದ ಎತ್ತಿನ ರಕ್ಷಣೆ - ಬಾವಿಗೆ ಬಿದ್ದ ಎತ್ತು

ಎರಡು ಎತ್ತುಗಳ ನಡುವೆ ಕಾದಾಟ ನಡೆದು, ಬಾವಿಗೆ ಬಿದ್ದಿದ್ದ ಎತ್ತೊಂದನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಎತ್ತಿನ ರಕ್ಷಣೆ

By

Published : Sep 17, 2019, 4:13 AM IST

ರಾಯಚೂರು:ಬಾವಿಯಲ್ಲಿ ಬಿದ್ದಿದ್ದ ಎತ್ತನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ತಾಲೂಕಿನ ವಡ್ಲೂರು ಗ್ರಾಮದ ಹೊರವಲಯದಲ್ಲಿ ಎರಡು ಎತ್ತುಗಳ ನಡುವೆ ಕಾದಾಟ ನಡೆದಿದೆ. ಈ ವೇಳೆ ಗಂಜಳ್ಳಿ ಹುಸೇನಪ್ಪ ಎನ್ನುವರಿಗೆ ಸೇರಿದ ಎತ್ತು ಬಾವಿಗೆ ಬಿದ್ದಿದೆ. ಇದನ್ನ ಕಂಡ ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳದ ಮಾಹಿತಿ ನೀಡಿದ್ದರು.

ಬಾವಿಗೆ ಬಿದ್ದಿದ್ದ ಎತ್ತಿನ ರಕ್ಷಣೆ

ಮಾಹಿತಿ‌ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದ ಸಿಬ್ಬಂದಿ ಬಾವಿಯಿಂದ ಎತ್ತಿಗೆ ಬೆಲ್ಟ್ ಹಾಗೂ ಹಗ್ಗ ಕಟ್ಟಿ, ಕ್ರೇನ್ ನೆರವಿನಿಂದ ಸುರಕ್ಷಿತವಾಗಿ ಮೇಲೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆಯಿದ್ದರಿಂದ ಎತ್ತು ಪ್ರಾಣಾಪಾಯದಿಂದ ಪಾರಾಗಿದೆ.

ಎತ್ತಿನ ರಕ್ಷಣೆ

ಅಗ್ನಿಶಾಮಕ ದಳದ ವಿಶೇಷಾಧಿಕಾರಿ ಗುರುಪಾದಪ್ಪ ತೇಲಿ, ಪ್ರಮುಖರಾದ ಮಾರುತಿ, ಸಿಬ್ಬಂದಿಯಾದ ಅಂಬರೇಶ, ಪಿಟ್ಟಪ್ಪ, ದತ್ತಾತ್ರೇಯ, ಶಿವಕುಮಾರ್ ಸೇರಿದಂತೆ ಸ್ಥಳೀಯರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ABOUT THE AUTHOR

...view details