ಕರ್ನಾಟಕ

karnataka

ETV Bharat / state

ದಕ್ಷ ಪೊಲೀಸ್​ ಅಧಿಕಾರಿಯ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಿದ ರಾಯಚೂರು ಜನ - ರಾಯಚೂರು ಜಿಲ್ಲಾ ಪೊಲೀಸ್ ಸುದ್ದಿ

ರಾಯಚೂರು ಜಿಲ್ಲಾ ಪೊಲೀಸ್​ ವರಿಷ್ಟಾಧಿಕಾರಿ ಸಿ.ಬಿ. ವೇದಮೂರ್ತಿ ಅವರ ಹುಟ್ಟುಹಬ್ಬದ ಅಂಗವಾಗಿ ನಗರದ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ರಕ್ತದಾನ ಶಿಬಿರ ನಡೆಯಿತು.

ಪೊಲೀಸ್​ ವರಿಷ್ಟಾಧಿಕಾರಿಯ ಜನ್ಮದಿನ: ರಕ್ತದಾನ ಶಿಬಿರ

By

Published : Oct 17, 2019, 1:24 PM IST

Updated : Oct 17, 2019, 4:30 PM IST

ರಾಯಚೂರು:ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ವೇದಮೂರ್ತಿ ಅವರ ಜನ್ಮದಿನದ ಅಂಗವಾಗಿ ನಗರದ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಇಂದು ಭಾರತೀಯ ವೈದ್ಯಕೀಯ ಸಂಘ, ರೆಡ್ ಕ್ರಾಸ್ ಸಂಸ್ಥೆ, ರಕ್ತ ಭಂಡಾರ ನಿಧಿ, ರಿಮ್ಸ್ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಸ್ವಯಂ ಪ್ರೆರಿತ ರಕ್ತದಾನ ಶಿಬಿರ ಆಯೋಜಿಸಲಾಯಿತು.

ಸದರಿ ಶಿಬಿರದಲ್ಲಿ ಜಿಲ್ಲೆಯ ಪೊಲೀಸರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿ ಮಾನವೀಯತೆ ಮೆರೆದರು.

ಪೊಲೀಸರೆಂದರೆ ಕಾನೂನು ಸುವ್ಯವಸ್ಥೆ ಕಾಪಾಡುವ ನೆಪದಲ್ಲಿ ಜನರಲ್ಲಿ ಹಾಗೂ‌ ತಮ್ಮ ಅಧೀನದ ಸಿಬ್ಬಂದಿಗಳಲ್ಲಿ ಭಯದ ವಾತಾವರಣ ನಿರ್ಮಿಸುತ್ತಾರೆ ಎಂಬ ಮಾತು ಹೆಚ್ಚಾಗಿ ಕೇಳಬಹುದು. ಆದ್ರೆ ರಾಯಚೂರು ಜಿಲ್ಲೆಯ ಎಸ್ಪಿ ಸಿ.ಬಿ. ವೇದಮೂರ್ತಿಯವರು, ಜಿಲ್ಲೆಗೆ ಆಗಮಿಸಿದ ಆರಂಭದಿಂದಲೇ ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಸ್ವಚ್ಛತಾ ಅಭಿಯಾನ, ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ‌ ಭಾಗವಹಿಸುವಿಕೆ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಬಡ ನಿರ್ಗತಿಕರಿಗೆ ಸಹಾಯ ಮಾತ್ರವಲ್ಲದೇ ರಕ್ತದಾನ ಶಿಬಿರ ಸೇರಿದಂತೆ ಇತರೆ ಹಲವಾರು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಜನಸ್ನೇಹಿ ಪೊಲೀಸ್ ಆಗಿದ್ದಾರೆ.

ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ರಕ್ತದಾನ ಶಿಬಿರ

ತಮ್ಮ ಜನ್ಮದಿನವನ್ನು ವಿಭಿನ್ನವಾಗಿ‌ ಆಚರಿಸಿಕೊಳ್ಳಲು ಮುಂದಾಗಿರುವ ಎಸ್.ಪಿ. ವೇದಮೂರ್ತಿ ಅವರು, ಪೊಲೀಸ್ ಇಲಾಖೆಯಲ್ಲಿ ತಾವು ರಕ್ತದಾನ ಮಾಡುವುದರ ಜೊತೆಗೆ ಪೊಲೀಸ್ ಇಲಾಖೆ, ವಿವಿಧ ಸಂಘ ಸಂಸ್ಥೆ ಹಾಗೂ ಸಾರ್ವಜನಿಕರಿಗೆ ರಕ್ತದಾನ ಮಾಡಿ ಎಂದು ಕರೆ ನೀಡಿದ್ರು.

ಎಸ್ಪಿ ಅವರ ಕರೆಗೆ ಓಗೊಟ್ಟು ಪೊಲೀಸ್ ಇಲಾಖೆಯ ಸಿಬ್ಬಂದಿ ಮಾತ್ರವಲ್ಲದೇ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಛಾಯಾಚಿತ್ರಗ್ರಾಹಕರು, ಮಾಧ್ಯಮ ಮಿತ್ರರು, ಸಾರ್ವಜನಿಕರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದ್ದು ವಿಶೇಷವಾಗಿತ್ತು‌.

Last Updated : Oct 17, 2019, 4:30 PM IST

ABOUT THE AUTHOR

...view details