ರಾಯಚೂರು: ಕಲುಷಿತ ನೀರು ಸೇವಿಸಿ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ನಗರದ ಯರಗೇರಾ ಲೇಔಟ್ ನಿವಾಸಿ ಹಾಗೂ ಸರ್ಕಾರಿ ಇಂಜಿನಿಯರ್ ಕಾಲೇಜು ಉಪನ್ಯಾಸಕ ಜನಕರಾಜ (50) ಮೃತರು. ಈ ಮೂಲಕ ಸಾವನ್ನಪ್ಪಿದವರ ಸಂಖ್ಯೆ 5ಕ್ಕೇರಿದೆ.
ರಾಯಚೂರಿನಲ್ಲಿ ಕಲುಷಿತ ನೀರು ಕುಡಿದು ಮತ್ತೋರ್ವ ವ್ಯಕ್ತಿ ಸಾವು; ಮೃತರ ಸಂಖ್ಯೆ 5ಕ್ಕೇರಿಕೆ - raichur contaminated water case
ಕಲುಷಿತ ನೀರು ಕುಡಿದು ಜನಕರಾಜ ಎಂಬುವವರು ಸಾವನ್ನಪ್ಪಿದ್ದಾರೆ.
ಕಲುಷಿತ ನೀರು ಕುಡಿದು ಮತ್ತೋರ್ವ ವ್ಯಕ್ತಿ ಸಾವು
ಜನಕರಾಜರಿಗೆ ನಿರಂತರ ವಾಂತಿ ಭೇದಿ ಆಗುತ್ತಿತ್ತು. ಇದನ್ನು ಗಮನಿಸಿ ಪಕ್ಕದ ಮನೆಯವರು ಆಂಬ್ಯುಲೆನ್ಸ್ ಮೂಲಕ ಭಾನುವಾರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ರೋಗಿ ತಲೆಯಲ್ಲಿ ಬ್ಲಡ್ ಕ್ಲಾಟ್ ಆಗಿ ಮೃತಪಟ್ಟಿದ್ದಾರೆ ಎಂದು ರಿಮ್ಸ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ:ಮಂಗಳೂರು ಕಾಲೇಜ್ ಬೋರ್ಡ್ ಮೇಲೆ ಸಾವರ್ಕರ್ ಫೋಟೋ; ವಿದ್ಯಾರ್ಥಿಗಳ ಮಾರಾಮಾರಿ