ರಾಯಚೂರು: ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಪ್ರೇಮ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಹತ್ಯೆಯಲ್ಲಿ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.
ಸುಂಕಾಲಪೇಟೆ ನಿವಾಸಿಗಳಾದ ಮೌನೇಶ್ ಹಾಗೂ ಮಂಜುಳಾ ಎಂಬುವರ ಪ್ರೇಮ ವಿವಾಹ ವಿರೋಧಿಸಿ ನಾಲ್ವರ ಹತ್ಯೆಯಾಗಿತ್ತು. ಮಂಜುಳಾ ಕುಟುಂಬಸ್ಥರು ಮೌನೇಶ್ ಮನೆಗೆ ದಾಳಿ ಮಾಡಿ, ಮನೆಯಲ್ಲಿದ್ದ ಸಿಕ್ಕ ಸಿಕ್ಕ ವಸ್ತುಗಳಿಂದ ಮೌನೇಶ್ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ್ದರು. ಈ ವೇಳೆ ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಇವರಲ್ಲಿ ಮೌನೇಶ್ ತಂದೆ ಈರಪ್ಪ(65) ಚಿಕಿತ್ಸೆ ಫಲಕಾರಿಯಾಗಿದೆ ತಡರಾತ್ರಿ ಮೃತಪಟ್ಟಿದ್ದಾರೆ.