ರಾಯಚೂರು: ಆಟೋ ಹಾಗೂ ಟಂಟಂ ವಾಹನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಓರ್ವ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನೀರಮಾನವಿ ಬಳಿ ನಡೆದಿದೆ. ಹುಲಿರಾಜ್ ಕರಿಯಪ್ಪ (15) ಮೃತ ಬಾಲಕ. ಇಬ್ಬರು ಗಾಯಾಳುಗಳನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಆಟೋ ಹಾಗೂ ಟಂಟಂ ವಾಹನ ನಡುವೆ ಡಿಕ್ಕಿ: ಓರ್ವ ಸಾವು, ಇಬ್ಬರು ಗಾಯ - ಆಟೋ ಹಾಗೂ ಟಂಟಂ ವಾಹನ ನಡುವೆ ಡಿಕ್ಕಿ
ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನೀರಮಾನವಿ ಬಳಿ ಆಟೋ ಹಾಗೂ ಟಂಟಂ ವಾಹನ ನಡುವೆ ಡಿಕ್ಕಿ ಸಂಭವಿಸಿ ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ..
ಆಟೋ ಹಾಗೂ ಟಂಟಂ ವಾಹನ ನಡುವೆ ಡಿಕ್ಕಿ
ನೀರಮಾನವಿಯಿಂದ ಮಾನವಿ ಕಡೆ ಹೊರಟ್ಟಿದ್ದ ಆಟೋ ಹಾಗೂ ಮಾನವಿ ಮಾರ್ಗದಿಂದ ಬರುತ್ತಿದ್ದ ಟಂಟಂ ವಾಹನಗಳ ಮಧ್ಯೆ ಡಿಕ್ಕಿ ಸಂಭವಿಸಿದೆ. ಘಟನೆಯಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡು ಟ್ರಾಫಿಕ್ ಸಮಸ್ಯೆ ಉಂಟಾಯಿತು. ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಗಾಯಾಳುಗಳು ಹಾಗೂ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮಾನವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಇದನ್ನೂ ಓದಿ:ಎರಡು ವರ್ಷದ ನಂತರ ಇಂದಿನಿಂದ ಅಂತರರಾಷ್ಟ್ರೀಯ ವಿಮಾನಯಾನ ಪುನಾರಂಭ