ರಾಯಚೂರು:ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ಮನೆ ಕುಸಿದು ಬಿದ್ದು ವೃದ್ಧನೋರ್ವ ಮೃತಪಟ್ಟಿರುವ ಘಟನೆ ಜಿಲ್ಲೆಯ ಮಸ್ಕಿ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ನಡೆದಿದೆ. ಮರಿಯಪ್ಪ ಚಿನಿವಾಲ್ (60) ಮೃತ ದುರ್ದೈವಿ.
ರಾಯಚೂರಲ್ಲಿ ನಿರಂತರ ಮಳೆ: ಮನೆ ಕುಸಿದು ಬಿದ್ದು ವೃದ್ಧ ಸಾವು
ಮನೆ ಕುಸಿದು ಬಿದ್ದು ವೃದ್ಧ ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ನಡೆದಿದೆ.
ರಾಯಚೂರಿನಲ್ಲಿ ಮನೆ ಕುಸಿದು ಬಿದ್ದು ವೃದ್ಧ ಸಾವು
ಶುಕ್ರವಾರ ತಡರಾತ್ರಿ ಮರಿಯಪ್ಪ ಹಾಗೂ ಕುಟುಂಬಸ್ಥರು ಮಲಗಿದ್ದ ವೇಳೆ ಏಕಾಏಕಿ ಮನೆ ಕುಸಿದು ಬಿದ್ದಿದೆ. ಮನೆಯ ಅವಶೇಷಗಳಡಿ ಸಿಲುಕಿ ವೃದ್ಧ ಮರಿಯಪ್ಪ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಬಳಗಾನೂರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.