ರಾಯಚೂರು: ನಗರಕ್ಕೆ ನೀರು ಸರಬರಾಜು ಆಗುವ ಪೈಪ್‌ಲೈನ್ ಒಡೆದು ನೀರು ಪೋಲಾಗುತ್ತಿರುವ ಕುರಿತಂತೆ ಈಟಿವಿ ಭಾರತ್‌ನ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಪೈಪ್‌ಲೈನ್ ದುರಸ್ಥಿಗೊಳಿಸಿದ್ದಾರೆ.
ಅಧಿಕಾರಿಗಳ ಕಣ್ಣು ತೆರೆಸಿದ ವರದಿ.. ಪೈಪ್‌ಲೈನ್ ದುರಸ್ಥಿ.. ನೀರು ಪೋಲಾಗದಂತೆ ತಡೆದ ಈಟಿವಿ ಭಾರತ್.. - undefined
ನೀರು ಸರಬರಾಜು ಆಗುವ ಪೈಪ್ ಒಡೆದು ನೀರು ಪೋಲಾಗುತ್ತಿದ್ದರೂ ಅಧಿಕಾರಿಗಳು ಕಣ್ಣೆತ್ತಿ ನೋಡಲಿಲ್ಲ. ಆದರೆ, ಈಟಿವಿ ಭಾರತ್‌ನ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ದುರಸ್ಥಿ ಮಾಡಿಸಿದ್ದಾರೆ.
ಒಡೆದ ನೀರಿನ ಪೈಪ್
ನಗರದ ತಿಮ್ಮಾಪುರ ಪೇಟೆ ವ್ಯಾಪ್ತಿಯಲ್ಲಿ ಬರುವ ಹನುಮಾನ ಟಾಕೀಸ್ ಬಳಿ ಕೃಷ್ಣ ನದಿಯಿಂದ ನೀರು ಸರಬರಾಜು ಆಗುವ ಮುಖ್ಯ ಪೈಪ್‌ಲೈನ್ ಡ್ಯಾಮೇಜ್ ಆಗಿ ಅನಗತ್ಯ ನೀರು ಪೋಲಾಗುತ್ತಿತ್ತು. ಈ ಕುರಿತಂತೆ ನಗರಸಭೆ ಅಧಿಕಾರಿಗಳಿಗೆ ಸ್ಥಳೀಯರು ಗಮನಕ್ಕೆ ತಂದಿದ್ರು. ಆದರೂ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ರು.
ಆಗ ಈಟಿವಿ ಭಾರತ್ “ಪೈಪ್ ಲೈನ್ ಒಡೆದು ನೀರು ಪೋಲು: ನಿರ್ಲಕ್ಷ್ಯ ವಹಿಸಿದ ನಗರಸಭೆ ವಿರುದ್ದ ಜನ ಗರಂ” ಎಂಬ ಶೀರ್ಷಿಕೆಯಡಿ ಸುದ್ದಿ ಬಿತ್ತರಿಸಿತ್ತು. ಇದರಿಂದ ನಗರಸಭೆ ಅಧಿಕಾರಿಗಳು ಒಡೆದು ಹೋಗಿರುವ ಪೈಪ್ನ ದುರಸ್ಥಿಗೊಳಿಸಿ ನೀರು ಪೋಲಾಗುವುದನ್ನ ತಡೆದಿದ್ದಾರೆ.