ರಾಯಚೂರು: ಮಳೆ ನೀರಿನ ರಭಸಕ್ಕೆ ನಾರಾಯಣಪುರ ಬಲದಂಡೆ ಮುಖ್ಯ ನಾಲೆ ಲೈನಿಂಗ್ ಕೊಚ್ಚಿ ಹೋಗಿರುವ ಕುರಿತು 'ಈಟಿವಿ ಭಾರತ' ವರದಿ ಮಾಡಿತ್ತು. ಈ ವರದಿಯಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಇದೀಗ ತಾತ್ಕಾಲಿಕ ದುರಸ್ತಿಗೆ ಮುಂದಾಗಿದ್ದಾರೆ.
ಈಟಿವಿ ಭಾರತ ಫಲಶೃತಿ: ನಾರಾಯಣಪುರ ಬಲದಂಡೆ ಮುಖ್ಯ ನಾಲೆ ದುರಸ್ತಿಗೆ ಮುಂದಾದ ಅಧಿಕಾರಿಗಳು
'ಈಟಿವಿ ಭಾರತ' ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಮಳೆ ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದ ನಾರಾಯಣಪುರ ಬಲದಂಡೆ ಮುಖ್ಯ ನಾಲೆ ಲೈನಿಂಗ್ ದುರಸ್ತಿಗೆ ಮುಂದಾಗಿದ್ದಾರೆ.
ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೌಡೂರು ಗ್ರಾಮದ ಬಳಿ 44ನೇ ಕಿಲೋ ಮೀಟರ್ನಿಂದ 45 ನೇ ಕಿಲೋ ಮೀಟರ್ ಮಧ್ಯ ಭಾಗದಲ್ಲಿ ಜಮೀನುಗಳ ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಮಾಡದಿರುವುದರಿಂದ ನಾಲ್ಕು ಕಡೆಗಳಲ್ಲಿ ಮಳೆ ನೀರು ಮುಖ್ಯ ನಾಲೆಗೆ ನುಗ್ಗಿತ್ತು. ಪರಿಣಾಮ ಭಾರಿ ಪ್ರಮಾಣದ ಲೈನಿಂಗ್ ಕಾಮಗಾರಿ ಮತ್ತು ವೀಕ್ಷಣಾ ರಸ್ತೆ ಕೊಚ್ಚಿ ಹೋಗಿತ್ತು. ಈ ಕುರಿತು ಈಟಿವಿ ಭಾರತ 'ಅವೈಜ್ಞಾನಿಕ ಕಾಮಗಾರಿ: ಮಳೆಗೆ ಕೊಚ್ಚಿ ಹೋದ ನಾರಾಯಣಪುರ ಬಲದಂಡೆ ಮುಖ್ಯ ನಾಲೆ ಲೈನಿಂಗ್' ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟಿಸಿತ್ತು. ಈ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ತಾತ್ಕಾಲಿಕ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.
ನಾರಾಯಣಪುರ ಬಲದಂಡೆ ಮುಖ್ಯ ನಾಲೆ ಅಧುನೀಕರಣಕ್ಕೆ ಸರ್ಕಾರ 950 ಕೋಟಿಗೆ ಟೆಂಡರ್ ನೀಡಿದೆ. ಆದರೆ ಗುಣಮಟ್ಟದ, ನಿರೀಕ್ಷಿತ ಕಾಮಗಾರಿ ನಡೆಯುತ್ತಿಲ್ಲ ಎನ್ನುವ ಆರೋಪ ಪ್ರಾರಂಭದಿಂದಲೂ ಕೇಳಿಬಂದಿದೆ.