ರಾಯಚೂರು: ಎನ್ಆರ್ಸಿ, ಸಿಎಎ ಯಿಂದ ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಸಾಧ್ಯವಾಗುವುದಿಲ್ಲವೆಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ.
ಯರಮರಸ್ ಸರ್ಕ್ಯೂಟ್ ಹೌಸ್ ಸಭಾಂಗಣದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿಎಎ, ಎನ್ಆರ್ಸಿ ಕಾಯ್ದೆಯಿಂದ ಭಾರತವನ್ನ ಹಿಂದೂ ರಾಷ್ಟ್ರ ಮಾಡಲು ಆಗುವುದಿಲ್ಲ ಎಂಬುದನ್ನು ದೆಹಲಿ ಜನತೆ ತೋರಿಸಿದ್ದಾರೆ ಎಂದರು. ಇದೇ ವೇಳೆ ಅಮೆರಿಕದ ಅಧ್ಯಕ್ಷ ಟ್ರಂಪ್ ಭಾರತಕ್ಕೆ ಬಂದು, ಗುಜರಾತಿನಲ್ಲಿ ಸ್ಟೇಡಿಯಂ ಉದ್ಘಾಟಿಸಿದ್ರೆ ಈ ದೇಶವನ್ನು ಮಾರ್ಪಡಿಸಲು ಆಗುವುದಿಲ್ಲ ಎಂದರು.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಇನ್ನು ಸರೋಜಿನಿ ಮಹಿಷಿ ವರದಿ ಜಾರಿ ಆಗಬೇಕು. ಆದರೆ ಎಲ್ಲದಕ್ಕೂ ಬಂದ್ ಎಂದರೆ ಹೇಗೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದೆ. ಸಿಎಂ ಬಿ.ಎಸ್. ಯಡಿಯೂರಪ್ಪ ಸಂಪೂರ್ಣವಾಗಿ ಅವಧಿಪೂರ್ಣಗೊಳಿಸುವ ಬಗ್ಗೆ ಅವರ ಹೈಕಮಾಂಡ್ ಏನ್ ಹೇಳಿದೆ ಎಂಬುರ ಬಗ್ಗೆ ನಾನೇನು ಮಾತನಾಡುವುದಿಲ್ಲ. ರಾಜ್ಯ ರಾಜಕಾರಣವನ್ನು 58 ವರ್ಷಗಳಿಂದ ನೋಡಿದ್ದೇನೆ ಎಂದರು.
ದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಬಲಯುತವಾಗಿವೆ. ಇತ್ತೀಚಿಗೆ ಅನೇಕ 9 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ದೆಹಲಿ ಚುನಾವಣೆಯಲ್ಲಿ ಬಿಜೆಪಿ ಶೇಕಡಾವಾರು ಮತದಾನ ಕಡಿಮೆಯಾಗಿದ್ದರೆ, ಕಾಂಗ್ರೆಸ್ ತುಂಬಾ ಸಂಕಷ್ಟದಲ್ಲಿದೆ. ಕಾಂಗ್ರೆಸ್ನ 40 ಜನ ಸ್ಟಾರ್ ಕ್ಯಾಂಪೇನರ್ ಇದ್ದರೂ ಪಕ್ಷ ಸುಧಾರಣೆಯಾಗಿಲ್ಲ. ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡು ಹೋಗುವುದು ಕಷ್ಟ. ನಾವು ಮೈತ್ರಿ ಸರ್ಕಾರ ಮಾಡಲು ನಾವೇನು ಮೇಲೆ ಬಿದ್ದು ಹೋಗಿದ್ದಿಲ್ಲ ಎಂದು ದೇವೇಗೌಡ ಹೇಳಿದ್ರು.
ಮೈತ್ರಿ ಸರ್ಕಾರ ಬೀಳಲು ಯಾರು ಕಾರಣ ಎಂಬುವುದು ಎಲ್ಲರಿಗೂ ಗೊತ್ತಿದೆ. ಜೆಡಿಎಸ್ ಪಕ್ಷವನ್ನು ಶಕ್ತಿಯುತವಾಗಿ ಬಲಪಡಿಸಲು ಯತ್ನ ನಡೆಸಲಾಗುತ್ತದೆ. ರಾಜಕೀಯ ವಾಸ್ತವಾಂಶಗಳ ಕುರಿತ ಪುಸ್ತಕವನ್ನು ಒಂದೂವರೆ ತಿಂಗಳಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಹೆಚ್ಡಿಡಿ ತಿಳಿಸಿದರು.