ರಾಯಚೂರು: ಕೊರೊನಾ ಸೋಂಕಿನ ಭೀತಿ ಹಿನ್ನಲೆಯಲ್ಲಿ ಸರಕಾರ ಅಧಿಕಾರಿಗಳು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ಜಾಗೃತಿ ಮೂಡಿಸುವ ಜತೆಗೆ ತಮ್ಮ ಕೆಲಸದಲ್ಲಿ ಅದನ್ನ ಅಳವಡಿಸಿಕೊಳ್ಳಬೇಕು. ಆದ್ರೆ ರಾಯಚೂರು ಜಿಲ್ಲಾ ನಗರಾಭಿವೃದ್ದಿ ಕೋಶ ಯೋಜನಾ ನಿರ್ದೇಶಕ ಕಚೇರಿ ಬಳಿ ಸಾಮಾಜಿಕ ಅಂತರ ಇಲ್ಲದೇ ಇರುವುದು ಕಂಡು ಬಂದಿದೆ.
ರಾಯಚೂರು ಡಿಸಿ ಕಚೇರಿಯಲ್ಲಿ ಸಾಮಾಜಿಕ ಅಂತರ ಮಾಯ - ರಾಯಚೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾಮಾಜಿಕ ಅಂತರ ಮಾಯ
ಆರೋಗ್ಯ, ತುರ್ತು ಸೇವೆ ಸೇರಿದಂತೆ ಅವಶ್ಯಕವಿರುವವರಿಗೆ ಓಡಾಡುವುದಕ್ಕೆ ಜಿಲ್ಲಾಡಳಿತದ ಪಾಸ್ ವಿತರಣೆ ನೀಡುತ್ತದೆ. ಪಾಸ್ ಗಾಗಿ ಬರುವ ಜನರಿಗೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸುವ ಬದಲು ಅಧಿಕಾರಿಗಳು ನಮಗೂ ಇದಕ್ಕೂ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ.
ರಾಯಚೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾಮಾಜಿಕ ಅಂತರ ಮಾಯ
ಆರೋಗ್ಯ, ತುರ್ತು ಸೇವೆ ಸೇರಿದಂತೆ ಅವಶ್ಯಕ ಇರುವವರಿಗೆ ಓಡಾಟಡುವುದಕ್ಕೆ ಜಿಲ್ಲಾಡಳಿತ ಪಾಸ್ ವಿತರಣೆ ನೀಡುತ್ತದೆ. ಈ ಜವಾಬ್ದಾರಿಯನ್ನ ಜಿಲ್ಲಾ ನಗರಾಭಿವೃದ್ದಿ ಕೋಶ ಯೋಜನಾ ನಿರ್ದೇಶಕರಿಗೂ ನೀಡಿದೆ. ಪಾಸ್ಗಾಗಿ ಬರುವ ಜನರಿಗೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸುವ ಬದಲು ಅಧಿಕಾರಿಗಳು ನಮಗೂ ಇದಕ್ಕೂ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ.
ಇನ್ನೊಬ್ಬರಿಗೆ ಮಾದರಿಯಾಗಬೇಕಾದ ಅಧಿಕಾರಿಗಳೇ ಜಿಲ್ಲಾಧಿಕಾರಿ ಕಚೇರಿಯ ಬಳಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದು ಅಧಿಕಾರಿ ನಿರ್ಲಕ್ಷ್ಯಕ್ಕೆ ಕೈಗನ್ನಡಿಯಾಗಿತ್ತು.