ಕರ್ನಾಟಕ

karnataka

ETV Bharat / state

ರಾಮುಲು ಆಪ್ತನ ಮಗಳ ವಿವಾಹದಲ್ಲಿ ಮಾಸ್ಕ್​, ಸಾಮಾಜಿಕ ಅಂತರ ಮಾಯ - No mask No social distance in Raichuru marriage

ಕೊರೊನಾ ಭೀತಿ ನಡುವೆಯೂ ಸಚಿವ ಶ್ರೀರಾಮುಲು ಆಪ್ತ ನಾಗರಾಜ್ ನೆಕ್ಕಂಟಿ ಮಗಳ ವಿವಾಹದಲ್ಲಿ ನೂರಾರು ಜನ ಭಾಗಿಯಾಗಿದ್ದು, ಯಾವುದೇ ಕೊರೊನಾ ಮುನ್ನೆಚ್ಚರಿಕಾ ಕ್ರಮಗಳು ಕಂಡುಬರಲಿಲ್ಲ.

ಅದ್ಧೂರಿ ವಿವಾಹದಲ್ಲಿ ಮಾಸ್ಕ್​, ಸಾಮಾಜಿಕ ಅಂತರ ನಾಪತ್ತೆ
ಅದ್ಧೂರಿ ವಿವಾಹದಲ್ಲಿ ಮಾಸ್ಕ್​, ಸಾಮಾಜಿಕ ಅಂತರ ನಾಪತ್ತೆ

By

Published : Oct 30, 2020, 11:37 AM IST

Updated : Oct 30, 2020, 11:56 AM IST

ರಾಯಚೂರು: ಕೊರೊನಾ ಭೀತಿ ನಡುವೆಯೂ ಸಚಿವ ಶ್ರೀರಾಮುಲು ಆಪ್ತ ನಾಗರಾಜ್ ನೆಕ್ಕಂಟಿ ತಮ್ಮ ಮಗಳ ವಿವಾಹವನ್ನು ಅದ್ಧೂರಿಯಾಗಿ ಮಾಡಿದ್ದಾರೆ.

ರಾಮುಲು ಆಪ್ತನ ಮಗಳ ವಿವಾಹ

ಜಿಲ್ಲೆಯ ಸಿಂಧನೂರು ಪಟ್ಟಣದ ಹೊರವಲಯದಲ್ಲಿರುವ ಕಲ್ಯಾಣ ಮಂಟಪದಲ್ಲಿ ವಿವಾಹ ಮಹೋತ್ಸವ ನಡೆದಿದೆ. 50 ಲಕ್ಷ ರೂ.ಗೂ ಅಧಿಕ ವೆಚ್ಚದಲ್ಲಿ ನಡೆದ ಸಮಾರಂಭದಲ್ಲಿ ಕೋವಿಡ್​ ಭೀತಿ ಕಡೆಗಣಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಮದುವೆಯಲ್ಲಿ ಭಾಗಿಯಾದ ಬಹುತೇಕರು ಮಾಸ್ಕ್​ ಧರಿಸದೇ, ಸಾಮಾಜಿಕ ಅಂತರವನ್ನೂ ಕಾಪಾಡಿಕೊಳ್ಳದಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.

ಸಚಿವ ಶ್ರೀರಾಮುಲು ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಭಾಗಿಯಾಗಿದ್ದರು. ಮದುವೆ ಮೆರವಣಿಯಲ್ಲಿ ವಿವಿಧ ಕಲಾ ತಂಡಗಳು, ನೂರಾರು ಮಂದಿ ಬಂಧುಗಳು ಭಾಗಿಯಾಗಿದ್ದರು.

Last Updated : Oct 30, 2020, 11:56 AM IST

For All Latest Updates

TAGGED:

ABOUT THE AUTHOR

...view details