ರಾಯಚೂರು: ಗಣೇಶ ಹಬ್ಬದ ಅಂಗವಾಗಿ ಗಣಪತಿ ಮೂರ್ತಿಗಳ ಖರೀದಿ ಜೋರಾಗಿದೆ. ಆದರೆ ಪರಿಸರ ಸ್ನೇಹಿ ಗಣಪನ ಕುರಿತು ಜನರಲ್ಲಿ ಜಾಗೃತಿ ಕೊರತೆಯಿಂದ ಮಣ್ಣಿನ ಗಣಪನಿಗೆ ನಿರೀಕ್ಷಿತ ಬೇಡಿಕೆ ಇಲ್ಲದಿರುವುದು ಕಂಡುಬಂದಿದೆ.
ರಾಯಚೂರಿನಲ್ಲಿ ಪರಿಸರ ಸ್ನೇಹಿ ಗಣಪನಿಗಿಲ್ಲ ನಿರೀಕ್ಷಿತ ಬೇಡಿಕೆ
ಕೊರೊನಾ ಹಿನ್ನೆಲೆ ರಾಜ್ಯ ಸರ್ಕಾರದ ಮಾರ್ಗಸೂಚಿ ಅನ್ವಯ ಹಬ್ಬ ಆಚರಣೆ ಚುರುಕುಗೊಂಡಿದ್ದು, ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದ ಪಿಓಪಿ ಗಣಪತಿ ಮೂರ್ತಿಗಳ ಮಾರಾಟ ಜೋರಾಗಿ ನಡೆದಿದೆ.
ಕೊರೊನಾ ಹಿನ್ನೆಲೆ ರಾಜ್ಯ ಸರ್ಕಾರದ ಮಾರ್ಗಸೂಚಿ ಅನ್ವಯ ಹಬ್ಬ ಆಚರಣೆ ಚುರುಕುಗೊಂಡಿದ್ದು, ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದ ಪಿಓಪಿ ಗಣಪತಿಗಳ ಮಾರಾಟ ಜೋರಾಗಿ ನಡೆದಿದೆ. ಆದರೆ ಪರಿಸರ ಕಾಳಜಿ ಕುರಿತು ಜನರು ಇನ್ನೂ ಜಾಗೃತರಾಗಿಲ್ಲ. ನಗರದಲ್ಲಿ ಪುಣೆ ಗಣಪತಿ ತಯಾರಿಕೆ ತಂಡದವರು ಈ ವರ್ಷ ಪರಿಸರ ಸ್ನೇಹಿ ಗಣಪತಿ ಹಬ್ಬವನ್ನಾಗಿಸಲು ಐದು ಇಂಚು ಗಣಪತಿಯಿಂದ 3 ಅಡಿ ವರೆಗೆ ವಿವಿಧ ಭಂಗಿಯ ಸುಂದರವಾದ ಗಣೇಶ ಮೂರ್ತಿಗಳನ್ನು ತಯಾರಿಸಿದ್ದರು. ಆದರೆ ಗ್ರಾಹಕರ ಬೇಡಿಕೆ ಮಾತ್ರ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ.
ಪುಣೆಯ ಗಣೇಶ ತಯಾರಿಕೆ ತಂಡದ ಪುನಿತ್ ಎಂಬುವವರು ಈಟಿವಿ ಭಾರತದೊಂದಿಗೆ ಮಾತನಾಡಿ, ನಾವು ಈ ವರ್ಷ ಪರಿಸರ ಸ್ನೇಹಿ ಹಬ್ಬವನ್ನಾಗಿಸಲು ಜೇಡಿ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸಿದ್ದು, ಎಲ್ಲಿಯೂ ರಾಸಾಯನಿಕ ಬಣ್ಣಗಳ ಬಳಕೆ ಮಾಡಿಲ್ಲ. ಗಣಪ ಸಂಪೂರ್ಣ ಪರಿಸರ ಸ್ನೇಹಿಯಾಗಿದೆ. ಆದರೆ, ಗ್ರಾಹಕರು ಮಾತ್ರ ದೊಡ್ಡದಾದ ಹಾಗೂ ಸುಂದರ ವಿವಿಧ ಬಣ್ಣ ಬಣ್ಣದ ಗಣೇಶ ಮೂರ್ತಿಗಳನ್ನು ಕೇಳುತ್ತಿದ್ದು, ಪರಿಸರ ಸ್ನೇಹಿ ಹಬ್ಬದ ಕುರಿತು ಜಾಗೃತಿ ಬೇಕಾಗಿದೆ. ಪ್ರತಿ ವರ್ಷ ಸಾವಿರಕ್ಕೂ ಅಧಿಕ ಮೂರ್ತಿ ತಯಾರಿಸುತ್ತಿದ್ದೆವು. ಆದರೆ ಇಂದು ಕೊರೊನಾ ಹಿನ್ನೆಲೆ ನೂರಾರು ಮೂರ್ತಿಗಳನ್ನು ತಯಾರಿಸಿದ್ದು, ಲಾಭ ಬೇಡ, ಹಾಕಿದ ಬಂಡವಾಳ ಬಂದರೆ ಸಾಕಾಗಿದೆ ಎಂದರು.