ಕರ್ನಾಟಕ

karnataka

ETV Bharat / state

ರಾಯಚೂರಿನಲ್ಲಿ ಒಂದೂ ಕೊರೊನಾ ಪಾಸಿಟಿವ್​ ವರದಿ ಬಂದಿಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ - Venkatesh Kumar

ರಾಯಚೂರಿಗೆ ಇದುವರೆಗೆ 176 ಜನ ಹೊರ ದೇಶದಿಂದ ಬಂದಿದ್ದಾರೆ. ಆದ್ರೆ ಎಲ್ಲರ ವರದಿಗಳು ನೆಗೆಟಿವ್​ ಬಂದಿದೆ ಎಂದು ಜಿಲ್ಲಾಧಿಕಾರಿ ಆರ್​.ವೆಂಕಟೇಶ್​ ಕುಮಾರ್​​ ಸ್ಪಷ್ಟಪಡಿಸಿದ್ದಾರೆ.

ಜಿಲ್ಲಾಧಿಕಾರಿ ಆರ್​. ವೆಂಕಟೇಶ್​ ಕುಮಾರ್​​
ಜಿಲ್ಲಾಧಿಕಾರಿ ಆರ್​. ವೆಂಕಟೇಶ್​ ಕುಮಾರ್​​

By

Published : Apr 2, 2020, 5:26 PM IST

ರಾಯಚೂರು:ಜಿಲ್ಲೆಯಿಂದ ಕಳಿಸಲಾಗಿದ್ದ ಕೊರೊನಾ ಶಂಕಿತರ ಮಾದರಿಗಳ ವರದಿಗಳೆಲ್ಲವೂ ನೆಗಟಿವ್ ಬಂದಿವೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.

ಜಿಲ್ಲೆಗೆ ಇದುವರೆಗೆ 176 ಜನ ಹೊರ ದೇಶದಿಂದ ಬಂದಿದ್ದಾರೆ. ಎಲ್ಲರನ್ನೂ ಆರೋಗ್ಯ ತಪಾಸಣೆ ಮಾಡಿ, ಅವರ ಮನೆಯವರನ್ನೂ ಸೇರಿ 730 ಜನರನ್ನ ಹೋಮ್ ಕ್ವಾರಂಟೈನ್ ಮಾಡುವ ಮೂಲಕ‌ ನಿಗಾ ವಹಿಸಲಾಗಿದೆ.

730 ಜನರಲ್ಲಿ ಸುಮಾರು 500 ಜನರ ಹೋಮ್ ಕ್ವಾರಂಟೈನ್ ಅವಧಿ ಮುಗಿದಿದ್ದು, ಉಳಿದ ಜನರ ಕ್ವಾರಂಟೈನ್ ಅವಧಿ ಕೆಲವು ದಿನಗಳಲ್ಲಿ ಮುಗಿಯಲಿದೆ. ಹೀಗಾಗಿ ಇದುವರೆಗೆ ಯಾವುದೇ ಕೊರೊನಾ ಪಾಸಿಟಿವ್ ವರದಿ ಬಂದಿಲ್ಲ. ಬದಲಾಗಿ ನೆಗೆಟಿವ್ ವರದಿಗಳು ಬಂದಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ABOUT THE AUTHOR

...view details