ರಾಯಚೂರು: ಜಿಲ್ಲೆಯಿಂದ ಇಂದು 39 ಕೊರೊನಾ ಶಂಕಿತರ ರಕ್ತ ಹಾಗೂ ಗಂಟಲಿನ ದ್ರವದ ಮಾದರಿಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.
ರಾಯಚೂರಿನಲ್ಲಿ 39 ಕೊರೊನಾ ಶಂಕಿತರ ಗಂಟಲು ದ್ರವ ಪರೀಕ್ಷೆಗೆ ರವಾನೆ - Corona letest up date
ರಾಯಚೂರಿನಲ್ಲಿ ಇಂದು ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
ರಾಯಚೂರಿನಲ್ಲಿ ಇಂದು ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ
ಇದುವರೆಗೆ 826 ಜನರ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು, 538 ವರದಿಗಳು ನೆಗೆಟಿವ್ ಬಂದಿವೆ. 5 ವರದಿ ತಿರಸ್ಕೃತಗೊಂಡಿದ್ದು, ಉಳಿದ 283 ವರದಿಗಳು ಬರುವುದು ಬಾಕಿಯಿದೆ. ಫೀವರ್ ಕ್ಲಿನಿಕ್‍ಗಳಲ್ಲಿ 186 ಜನರನ್ನು ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಿಸಲಾಗಿದ್ದು, 296 ಜನರನ್ನು ಸರ್ಕಾರಿ ಕ್ವಾರಂಟೈನ್‍ಲ್ಲಿ ಇರಿಸಲಾಗಿದೆ.
ಇಂದು ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.