ರಾಯಚೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪನವರ ನಡುವೆ ಯಾವುದೇ ಜಟಾಪಟಿಯಿಲ್ಲ ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು. ರಾಯಚೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಶಾಮನೂರು ಶಿವಶಂಕರಪ್ಪನವರ ಮಗ ಮಲ್ಲಿಕಾರ್ಜುನ ಕ್ಯಾಬಿನೆಟ್‌ನಲ್ಲಿ ನಮ್ಮ ಸದಸ್ಯರು. ಅವರಿಗೆ ಎಷ್ಟು ಪ್ರಾಧಾನ್ಯತೆ ಕೊಡಬೇಕೋ ಅಷ್ಟು ಕೊಡಲಾಗಿದೆ. ಇನ್ನೂ ಬೇಕು ಅಂದ್ರೆ ಅದನ್ನೂ ನೀಡಲಾಗುತ್ತದೆ. ಶ್ಯಾಮನೂರು ನಮ್ಮೆಲ್ಲರ ಹಿರಿಯರ ನಾಯಕ. ಬಹಳ ಸೀನಿಯರ್ ಹಾಗೂ ಪಕ್ಷ ನಿಷ್ಠೆಯಿಂದಿದ್ದು ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ಅಧಿಕಾರಿಗಳು ತಪ್ಪು ಮಾಹಿತಿ ನೀಡಿರಬಹುದು: ಶಾಮನೂರು ಅವರಿಗೆ ಯಾರೋ ಅಧಿಕಾರಿಗಳು ತಪ್ಪು ಮಾಹಿತಿ ನೀಡಿರಬಹುದು. ಅದನ್ನು ತಪ್ಪಾಗಿ ಗ್ರಹಿಸಿಕೊಂಡು ಮಾತಾಡಿರಬಹುದು. ಅವರು ಹಿರಿಯರಾಗಿದ್ದು, ನಮಗೆ ಯಾವಾಗಲೂ ಸಲಹೆ, ಸೂಚನೆ ಕೊಡುತ್ತಾರೆ ಎಂದರು.