ರಾಯಚೂರು:ಧಾರಾಕಾರ ಮಳೆಯ ಪರಿಣಾಮ ಜಿಲ್ಲೆಯ ದೇವದುರ್ಗ ತಾಲೂಕಿನ ವಂದಲಿ ಗ್ರಾಮದಲ್ಲಿ ಬಾಳೆ ತೋಟ ಸಂಪೂರ್ಣ ನಾಶವಾಗಿದೆ.
ರಾತ್ರಿಯಿಡೀ ಸುರಿದ ಮಳೆ: ನೆಲಕಚ್ಚಿದ 4 ಎಕರೆ ಬಾಳೆತೋಟ - ಪಪಾಯಿ ಸಸಿಗಳು ನೀರು ಪಾಲು
ಸುರಿದ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯಲ್ಲಿ ದೇವದುರ್ಗ ತಾಲೂಕಿನ ವಂದಲಿ ಗ್ರಾಮದಲ್ಲಿ ಬಾಳೆ ತೋಟ ಸಂಪೂರ್ಣ ನಾಶವಾಗಿದೆ.
nightfull Heavy rain at Raichur
ವಂದಲಿ ಗ್ರಾಮದ ರೈತ ಶಾಂತಪ್ಪ ಚಿಂಚರಕಿ ಎಂಬವರ ತನ್ನ 4 ಎಕರೆ ಜಮೀನಿನಲ್ಲಿ ಬಾಳೆ ತೋಟವಿದ್ದು, ಈಗಾಗಲೇ ಫಸಲು ಕೂಡ ಕೈಗೆ ಬಂದಿತ್ತು. ಆದ್ರೆ ಗುರುವಾರ ರಾತ್ರಿಯಿಡಿ ಸುರಿದ ಮಳೆಯಿಂದ ತೋಟಕ್ಕೆ ನೀರು ನುಗ್ಗಿದೆ. ಇದರ ಪರಿಣಾಮ ಮತ್ತೊಂದು ಎಕರೆಯಲ್ಲಿ ಪಪ್ಪಾಯಿ ಸಸಿಗಳು ನೀರು ಪಾಲಾಗಿದೆ. ಹೀಗಾಗಿ ಲಕ್ಷಾಂತರ ರೂಪಾಯಿ ಬೆಳೆ ನಷ್ಟವಾಗಿದೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಬೆಳೆ ನಷ್ಟವಾಗಿರುವುದನ್ನು ಪರಿಶೀಲನೆ ನಡೆಸಿ, ಬೆಳೆ ನಷ್ಟ ಪರಿಹಾರ ಒದಗಿಸುವಂತೆ ರೈತರು ಒತ್ತಾಯಿಸಿದ್ದಾರೆ.