ಕರ್ನಾಟಕ

karnataka

ETV Bharat / state

ನಿವಾರ್ ಎಫೆಕ್ಟ್: ಗದ್ದೆಯಲ್ಲಿ ನೆಲಕಚ್ಚಿದ ಭತ್ತ, ಗಿಡದಲ್ಲೇ ಮೊಳಕೆಯೊಡದ ಹತ್ತಿ - ರಾಯಚೂರು ಜಿಲ್ಲೆಯಲ್ಲಿ ಗದ್ದೆಯಲ್ಲಿ ನೆಲಕಚ್ಚಿದ ಭತ್ತ ಕಂಗಾಲಾದ ರೈತರು

ತಾಲೂಕಿನ ತಲೆಮಾರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಭತ್ತದ ಪೈರು ಕೊಯ್ಲುಗೆ ಬಂದಿದೆ. ಆದ್ರೆ ನಿವಾರ್ ಎಫೆಕ್ಟ್ ನಿಂದ ಬೆಳೆ ಭಾಗಿರುವುದರಿಂದ ಕಟಾವ್ ಮಾಡಲು ಸಾಧ್ಯವಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Newar Effect Paddy, cotton crop destruction in Raichur
ಗಿಡದಲ್ಲೆ ಮೋಳಕೆಯೊಡದ ಹತ್ತಿ ಆತಂಕದಲ್ಲಿ ರೈತರು

By

Published : Nov 30, 2020, 8:54 AM IST

ರಾಯಚೂರು: ನಿವಾರ್ ಎಫೆಕ್ಟ್​​​​​ನಿಂದ ಜಿಲ್ಲೆಯ ವಿವಿಧಡೆ ಮಳೆ ಸುರಿದ ಪರಿಣಾಮ ಗದ್ದೆಯಲ್ಲಿ ಬೆಳೆದು ನಿಂತ ಭತ್ತದ ಪೈರು ನೆಲಕಚ್ಚಿ ಬೆಳೆ ಮಣ್ಣು ಪಾಲಾಗಿದೆ. ಹತ್ತಿಯ ಬೆಳೆ ನೀರಿಗೆ ತೋಯ್ದ ಹಾನಿಯಾಗುತ್ತಿದೆ.

ಗಿಡದಲ್ಲೆ ಮೋಳಕೆಯೊಡದ ಹತ್ತಿ ಆತಂಕದಲ್ಲಿ ರೈತರು

ತಾಲೂಕಿನ ತಲೆಮಾರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಭತ್ತದ ಪೈರು ಕೊಯ್ಲಿಗೆ ಬಂದಿದೆ. ಆದ್ರೆ ನಿವಾರ್ ಎಫೆಕ್ಟ್ ನಿಂದ ಬೆಳೆ ಭಾಗಿರುವುದರಿಂದ ಕಟಾವ್ ಮಾಡಲು ಸಾಧ್ಯವಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಕರೆಗೆ ಸರಿ ಸುಮಾರು 20 ಸಾವಿರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆ ಮಣ್ಣುಪಾಲಗುತ್ತಿರುವುದು ರೈತರನ್ನ ಚಿಂತೆಗೀಡು ಆಗುವಂತೆ ಮಾಡಿದೆ.

ಓದಿ:ಕೊರೊನಾ ಎಫೆಕ್ಟ್.. ದೇಹಾಂಗ ದಾನಿಯ ಶವ ಸ್ವೀಕರಿಸಲು ಹಿನ್ನಡೆ..

ಇನ್ನು ಹತ್ತಿ ಬೆಳೆ ಸಹ ಮಳೆಗೆ ತೋಯ್ದ ಹೊಲದಲ್ಲಿ ಹಾನಿಯಾಗುತ್ತಿದೆ. ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಹತ್ತಿ ಬೆಳೆ ನಿವಾರ್ ಎಫೆಕ್ಟ್ ನಿಂದ ಹಾನಿಯಾಗುತ್ತಿದೆ. ಇಷ್ಟೆಲ್ಲ ಆಗಿ ರೈತರು ಸಮಸ್ಯೆಗೆ ಸಿಲುಕಿದರೂ, ಚುನಾಯಿತ ಪ್ರತಿನಿಧಿಗಳು, ಮಸ್ಕಿ ವಿಧಾನಸಭಾ ಬೈ ಎಲೆಕ್ಷನ್ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆ ಸಿದ್ದತೆಯಲ್ಲಿ ಮಗ್ನವಾಗಿದ್ದಾರೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ರೈತರ ನೆರವಿಗೆ ಬರುವ ಮೂಲಕ ನಷ್ಟ ಪರಿಹಾರವನ್ನ ನೀಡಬೇಕಿದೆ ಎಂದು ಆಗ್ರಹಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details