ಕರ್ನಾಟಕ

karnataka

ETV Bharat / state

ಬಿಸಿಲಿಗೆ ಹೆದರಿ ವಾಹನ ಸವಾರರಿಂದ ರಸ್ತೆ​ ನಿಯಮ ಉಲ್ಲಂಘನೆ: ಖಾಕಿ ಹೊಸ ಪ್ಲಾನ್​ - undefined

ಬಿಸಿಲಿನ ತೀವ್ರತೆ ತಾಳಲಾರದೆ ಪ್ರಮುಖ ಸರ್ಕಲ್‌ಗಳಲ್ಲಿ ವಾಹನ ಸವಾರರು ಸಿಗ್ನಲ್ ಜಂಪ್ ಮಾಡುತ್ತಿದ್ದಾರೆ. ಈ ಸಂಚಾರಿ ನಿಯಮಗಳನ್ನು ಉಲ್ಲಂಘನೆ ತಡೆಯಲು ರಾಯಚೂರು ಸಂಚಾರಿ ಪೊಲೀಸರು ಹೊಸ ಪ್ಲಾನ್ ರೂಪಿಸಿದ್ದಾರೆ.

ಬಸವೇಶ್ವರ ವೃತ್ತದ ಬಳಿಯ ಸಿಗ್ನಲ್​ನಲ್ಲಿ ಹಸಿರು ಹೊದಿಕೆ ಕಟ್ಟಿರುವುದು

By

Published : Apr 3, 2019, 6:32 PM IST

Updated : Apr 3, 2019, 7:44 PM IST

ರಾಯಚೂರು: ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಬೇಸಿಗೆ ಬಂದ್ರೆ, ವಿಪರೀತ ತಾಪದಿಂದ ಜನ ಹೈರಾಣಾಗುತ್ತಾರೆ. ಬೆಳಗ್ಗೆ ಸುಮಾರು 11ಗಂಟೆಯಿಂದ ಶುರುವಾಗುವ ಬಿಸಿಲಿನ ಝಳದಿಂದ ಕಂಗಾಲಾಗಿದ್ದಾರೆ.

ಬಸವೇಶ್ವರ ವೃತ್ತದ ಬಳಿಯ ಸಿಗ್ನಲ್​ನಲ್ಲಿ ಹಸಿರು ಹೊದಿಕೆ ಕಟ್ಟಿರುವುದು

ಇನ್ನು ತಾಪಮಾನ ತಾಳಲಾರದೆ ಪ್ರಮುಖ ಸರ್ಕಲ್‌ಗಳಲ್ಲಿ ವಾಹನ ಸವಾರರು ಸಿಗ್ನಲ್ ಜಂಪ್ ಮಾಡುವ ಮೂಲಕ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಸ್ತೆ ನಿಯಮ ಉಲ್ಲಂಘನೆ ತಡೆಯಲು ಸಂಚಾರಿ ಪೊಲೀಸರು ಹಸಿರು ಹೊದಿಕೆಯ ಪ್ಲಾನ್ ರೂಪಿಸಿದ್ದಾರೆ.

ಸಂಚಾರಿ ನಿಯಮಗಳನ್ನ ಪಾಲಿಸುವುದು ಪ್ರತಿವೋರ್ವ ವಾಹನ ಸವಾರನ ಕರ್ತವ್ಯ. ಆದರೆ ಬೇಸಿಗೆಯಲ್ಲಿ ಬಿಸಿಲಿನ ತಾಪಕ್ಕೆ ಕಂಗಾಲಾಗಿರುವ ಜನರು ಜಿಲ್ಲೆಯಲ್ಲಿರುವ ಸಿಗ್ನಲ್​ಗಳನ್ನು ಜಂಪ್ ಮಾಡಿ ನಿಯಮ ಉಲ್ಲಂಘಿಸುತ್ತಿದ್ದಾರೆ. ಆದ್ದರಿಂದ ಇಂತಹ ಸಮಸ್ಯೆಗಳನ್ನು ನಿಯಂತ್ರಿಸಲು ಜಿಲ್ಲಾ ಪೊಲೀಸ್ ಇಲಾಖೆ ಸಿಗ್ನಲ್​ಗಳ ಬಳಿ ನೆರಳಿನ ವ್ಯವಸ್ಥೆ ಮಾಡಿದೆ. ನಗರದ ಬಸವೇಶ್ವರ ವೃತ್ತದ ಬಳಿಯ ಸಿಗ್ನಲ್​ನ್ನ ಪ್ರಾಯೋಗಿಕವಾಗಿ ಬಳಸಿಕೊಂಡು ಅಲ್ಲಿ ಕಂಬ ಅಳವಡಿಸಿದೆ. ಅದಕ್ಕೆ ಹಸಿರು ಹೊದಿಕೆಯನ್ನು ಶೆಲ್ಟರ್​(ಗುಡಿಸಲು) ರೀತಿ ಅಳವಡಿಸುವ ಮೂಲಕ ನೆರಳಿನ ವ್ಯವಸ್ಥೆಯನ್ನ ಮಾಡಲಾಗಿದೆ.

ಈ ಪ್ರಯೋಗ ಯಶಸ್ವಿಯಾದರೆ ನಗರದಲ್ಲಿನ ಅಂಬೇಡ್ಕರ್ ಸರ್ಕಲ್, ಗಂಜ್ ಸರ್ಕಲ್ ಮತ್ತು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲು ಚಿಂತನೆ ನಡೆಸಿದ್ದಾರೆ ಅಧಿಕಾರಿಗಳು. ಈಗಾಗಲೇ ಜಿಲ್ಲೆಯಲ್ಲಿ 41 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದನ್ನರಿತ ರಾಯಚೂರು ಎಸ್ಪಿ ಡಾ. ಕಿಶೋರ್ ಬಾಬು ಅವರು ವಿಜಯಪುರ ಮಾದರಿಯಲ್ಲಿ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಿದ್ದಾರೆ.

Last Updated : Apr 3, 2019, 7:44 PM IST

For All Latest Updates

TAGGED:

ABOUT THE AUTHOR

...view details