ರಾಯಚೂರು: ಜಿಲ್ಲೆಯಲ್ಲೂ ಕೊರೊನಾ ರೂಪಾಂತರ ಭೀತಿ ಶುರುವಾಗಿದೆ. ಇಂಗ್ಲೆಂಡ್‌ಗೆ ತೆರಳಿದ್ದ 8 ಮಂದಿ ಜಿಲ್ಲೆಗೆ ವಾಪಸ್ ಆಗಿದ್ದಾರೆ ಎನ್ನಲಾಗುತ್ತಿದ್ದು, ಅವರ ಮೇಲೆ ನಿಗಾ ವಹಿಸಲಾಗಿದೆ.
ಹೊಸ ಬಗೆಯ ಕೊರೊನಾ ಭೀತಿ: ಬ್ರಿಟನ್‌ನಿಂದ ಬಂದ 8 ಜನರ ಮೇಲೆ ನಿಗಾ - raichur news
ಸಿಂಧನೂರು ತಾಲೂಕಿನ ಕ್ಯಾಂಪ್ ಒಂದರ 4 ಜನ ಹಾಗು ರಾಯಚೂರು ತಾಲೂಕಿಗೆ ನಾಲ್ವರು ಸೇರಿ ಒಟ್ಟು 8 ಮಂದಿ ಇಂಗ್ಲೆಂಡ್ನಿಂದ ಮರಳಿದ್ದು, ಕ್ವಾರಂಟೈನ್ ಮಾಡಲಾಗಿದೆ.
ರೂಪಾಂತರ ಕೊರೊನಾ ಭೀತಿ
ಸಿಂಧನೂರು ತಾಲೂಕಿನ ಕ್ಯಾಂಪ್ ಒಂದರ 4 ಜನ ಹಾಗು ರಾಯಚೂರು ತಾಲೂಕಿನ ನಾಲ್ವರು ಇಂಗ್ಲೆಂಡ್ನಿಂದ ಮರಳಿದ್ದಾರೆ. ಈ ಎಂಟು ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ರವಾನಿಸಲಾಗಿದ್ದು,ಎಲ್ಲರನ್ನೂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.
ಇವರ ಪೈಕಿ ಒಂದು ಮಗು ಸಹ ಇದ್ದು ಯಾರಲ್ಲೂ ರೋಗ ಲಕ್ಷಣಗಳು ಕಂಡು ಬಂದಿಲ್ಲ ಎಂಬ ಮಾಹಿತಿ ದೊರೆತಿದೆ.