ರಾಯಚೂರು: ಜಿಲ್ಲೆಯಲ್ಲಿ ಇಂದು 21 ಮಂದಿ ಕೊರೊನಾ ಶಂಕಿತರು ಪತ್ತೆಯಾಗಿದ್ದು, ಶಂಕಿತರ ಗಂಟಲು ದ್ರವ ಮತ್ತು ರಕ್ತದ ಮಾದರಿಗಳನ್ನು ಪರೀಕ್ಷೆಗೆ ಬೆಂಗಳೂರಿನ ಪ್ರಯೋಗಾಲಕ್ಕೆ ಕಳುಹಿಸಲಾಗಿದೆ.
ರಾಯಚೂರಲ್ಲಿ 21 ಮಂದಿ ಕೊರೊನಾ ಶಂಕಿತರ ಗಂಟಲು ದ್ರವ ಪರೀಕ್ಷೆಗೆ ರವಾನೆ - ಕೊರೊನಾ ಶಂಕಿತರು ಪತ್ತೆ
ರಾಯಚೂರಿನಲ್ಲಿ 21 ಮಂದಿ ಕೊರೊನಾ ಶಂಕಿತರು ಪತ್ತೆಯಾಗಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ 41 ಶಂಕಿತರ ಪೈಕಿ 9 ಶಂಕಿತರ ವರದಿ ನೆಗಟಿವ್ ಬಂದಿದೆ. ಉಳಿದವರ ವರದಿ ಬಾಕಿ ಇದೆ.
ಕೊರೊನಾ ಶಂಕಿತರು ಪತ್ತೆ
ಜಿಲ್ಲೆಯಲ್ಲಿ ಒಟ್ಟು 41 ಜನರು ಶಂಕಿತರು ಪತ್ತೆಯಾಗಿದ್ದಾರೆ. ಕೆಲ ದಿನಗಳಿಂದ ಶಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದೆ.
ಜಿಲ್ಲೆಯ 41 ಶಂಕಿತರ ಪೈಕಿ 9 ಜನರ ವರದಿ ನೆಗೆಟಿವ್ ಬಂದಿದ್ದು, ಸೋಂಕಿನ ಲಕ್ಷಣಗಳು ಇಲ್ಲದ ಕಾರಣ ಇಬ್ಬರ ವರದಿಯನ್ನು ತಿರಸ್ಕರಿಸಲಾಗಿದೆ. ಸದ್ಯ 30 ಶಂಕಿತರ ವರದಿ ಬಾಕಿ ಇದೆ. ಹೊರ ದೇಶದಿಂದ ಬಂದವರ ಸಂಖ್ಯೆಯಲ್ಲಿ ಯಾವುದೇ ಏರಿಕೆಯಾಗದಿದ್ದರೂ ಕ್ವಾರಂಟೈನ್ನಲ್ಲಿರುವ ಸಂಖ್ಯೆ ಏರಿಕೆಯಾಗಿದೆ.