ಕರ್ನಾಟಕ

karnataka

ETV Bharat / state

ಕೊರೊನಾ ಚಿಕಿತ್ಸೆಗಾಗಿ ನವೋದಯ ಆಸ್ಪತ್ರೆಯಲ್ಲಿ 250 ಬೆಡ್​​ಗಳ ಸಿದ್ಧತೆ.. - raichur navoday news

ನಗರದಲ್ಲಿ ಡಿ ಗ್ರೂಪ್‌ನ ನೂರಾರು ನೌಕರರಿಗೆ ವಾರಕ್ಕೆ ಆಗುವ ದಿನಸಿಯನ್ನ ವಿತರಣೆ ಮಾಡಿ ಮಾತನಾಡಿ ನವೋದಯ ಅಧ್ಯಕ್ಷ ಎಸ್. ಆರ್. ರೆಡ್ಡಿ ಕೊರೊನಾ ವೈರಸ್‌‌ನ ಚಿಕಿತ್ಸೆಗಾಗಿ 250 ಬೆಡ್‌ಗಳ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.

ನವೋದಯ ಆಸ್ಪತ್ರೆ

By

Published : Apr 11, 2020, 1:02 PM IST

ರಾಯಚೂರು : ನವೋದಯ ಆಸ್ಪತ್ರೆಯಲ್ಲಿ ಕೊರೊನಾ ವೈರಸ್‌‌ನ ಚಿಕಿತ್ಸೆಗಾಗಿ 250 ಬೆಡ್‌ಗಳನ್ನು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ನವೋದಯ ಸಂಸ್ಥೆಯ ಅಧ್ಯಕ್ಷ ಎಸ್. ಆರ್. ರೆಡ್ಡಿ ತಿಳಿಸಿದ್ದಾರೆ.

ನಗರದ ನವೋದಯ ಫೌಂಡೇಶೇಷನ್ ವತಿಯಿಂದ ಆಸ್ಪತ್ರೆ‌ ಹಾಗೂ ಕಾಲೇಜಿನಲ್ಲಿ ಕೆಲಸ ಮಾಡುವ ಡಿ ಗ್ರೂಪ್‌ನ ನೂರಾರು ನೌಕರರಿಗೆ ವಾರಕ್ಕೆ ಆಗುವ ದಿನಸಿಯನ್ನ ವಿತರಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್-19ಗಾಗಿ ಮೂರು ವಿಭಾಗಗಳನ್ನ ವಿಭಾಗ ಮಾಡಿ 250 ಬೆಡ್‌ಗಳನ್ನ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದರಲ್ಲಿ ಐಸೋಲೋಷನ್ ವಾರ್ಡ್, ಐಸಿಯು ವಾರ್ಡ್, ಕ್ವಾರಂಟೈನ್ ವಾರ್ಡ್‌ಗಳನ್ನ ನಿರ್ಮಾಣ ಮಾಡಲಾಗಿದೆ. ಇದರ ಹೊರತಾಗಿ ಎಲ್ಲಾ ಕಾಯಿಲೆಗಳ ಚಿಕಿತ್ಸೆ ಕೂಡ ನೀಡಲಾಗುತ್ತಿದೆ ಎಂದು ತಿಳಿಸಿದ್ರು.

ABOUT THE AUTHOR

...view details