ರಾಯಚೂರು:ಪ್ರಕೃತಿ ವಿಕೋಪದಿಂದ ನಲುಗಿರುವ ಒಡಿಶಾದಲ್ಲಿ ವಿದ್ಯುತ್ ದುರಸ್ತಿ ಕಾರ್ಯದಲ್ಲಿ ರಾಜ್ಯದ ವಿವಿಧ ಜಿಲ್ಲೆಯಿಂದ, ಹಾಗೂ ಜೆಸ್ಕಾಂ ವಿಭಾಗದಿಂದ ನೂರಾರು ಲೈನ್ಮ್ಯಾನ್ಗಳು ಕರ್ತವ್ಯಕ್ಕೆ ತೆರಳುತ್ತಿದ್ದು, ಜನತೆ ಅವರಿಗೆ ಶುಭ ಕೂರಿದ್ದಾರೆ.
ಒಡಿಶಾದಲ್ಲಿ ಪ್ರಕೃತಿ ವಿಕೋಪ: ವಿದ್ಯುತ್ ದುರಸ್ತಿ ಕಾರ್ಯಕ್ಕೆ ರಾಜ್ಯದ ಲೈನ್ಮ್ಯಾನ್ಗಳು! - undefined
ಒಡಿಶಾದಲ್ಲಿ ಕಂಡು ಬಂದಿರುವ ಪ್ರಕೃತಿ ವಿಕೋಪದಿಂದ ವಿದ್ಯುತ್ ಸಂಪರ್ಕ ಸ್ಥಗಿತ ಗೊಂಡಿದೆ. ಹೀಗಾಗಿ ಅದರ ದುರಸ್ತಿ ಹಿನ್ನಲೆಯಿಂದಾಗಿ ಜಿಲ್ಲೆಯ 23 ಜನರು ಸೇರಿದಂತೆ ಕಲಬುರಗಿ ಜೆಸ್ಕಾಂ ವಿಭಾಗದಿಂದ ನೂರಾರು ಜನ ಲೈನ್ಮ್ಯಾನ್ಗಳು ವಿದ್ಯುತ್ ದುರಸ್ತಿ ಗೆ ನೊಯೋಜನೆಗೊಂಡಿದ್ದಾರೆ.
ಜೆಸ್ಕಾಂ ವಿಭಾಗಕ್ಕೆ ಬರುವ ಬೀದರ್, ಕಲಬುರಗಿ,ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಯಿಂದ ಸುಮಾರು 100ಕ್ಕೂ ಹೆಚ್ಚು ಲೈನ್ಮ್ಯಾನ್ಗಳು ಒಡಿಶಾದಲ್ಲಿ ವಿದ್ಯುತ್ ದುರಸ್ತಿ ಕಾರ್ಯಕ್ಕೆ ತೆರಳುತ್ತಿದ್ದಾರೆ. ಕಲಬುರಗಿ ಜಿಲ್ಲೆಯಿಂದ 17 ಜನ, ಯಾದಗಿರಿಯಿಂದ 3, ಬೀದರ್ ಜಿಲ್ಲೆಯಿಂದ 20 ಜನ, ಬಳ್ಳಾರಿ ಜಿಲ್ಲೆಯಿಂದ 20 ಜನ, ರಾಯಚೂರು ಜಿಲ್ಲೆಯಿಂದ 23 ಜನ ಸೇರಿದಂತೆ ಕೊಪ್ಪಳ ಜಿಲ್ಲೆಯಿಂದ ಲೈನ್ ಮ್ಯಾನ್ ಮತ್ತು ಎಇಇ(ಅಸಿಸ್ಟೆಂಟ್ ಎಕ್ಸಿಕೂಟಿವ್ ಇಂಜಿನಿಯರ್) ನೇತೃತ್ವದ ತಂಡ ಒಡಿಶಾಗೆ ಪ್ರಯಾಣ ಬೆಳೆಸಿದೆ.
ಒಡಿಶಾದಲ್ಲಿ ಕಂಡು ಬಂದಿರುವ ಪ್ರಕೃತಿ ವಿಕೋಪದಿಂದ ವಿದ್ಯುತ್ ಸಂಪರ್ಕ ಸ್ಥಗಿತ ಗೊಂಡಿದೆ. ಹೀಗಾಗಿ ಅದರ ದುರಸ್ಥಿ ಹಿನ್ನಲೆಯಿಂದಾಗಿ ಜಿಲ್ಲೆಯ 23 ಜನರು ಸೇರಿದಂತೆ ಕಲಬುರಗಿ ಜೆಸ್ಕಾಂ ವಿಭಾಗದಿಂದ ನೂರಾರು ಜನ ಲೈನ್ಮ್ಯಾನ್ಗಳು ವಿದ್ಯುತ್ ದುರಸ್ತಿಗೆ ಇಂದು ರಾತ್ರಿ ತೆರಳಿದ್ದು, ನಾಳೆ ಮದ್ಯಾಹ್ನದಿಂದ ಬೆಂಗಳೂರಿನಿಂದ ಟ್ರೈನ್ ಮೂಲಕ ಒಡಿಶಾಕ್ಕೆ ತೆರಳಲಿದ್ದಾರೆ ಎಂದು ಜೆಸ್ಕಾಂ ಮೂಲಗಳು ತಿಳಿಸಿವೆ.