ರಾಯಚೂರು:ಕೃಷ್ಣಾ ನದಿ ನೀರು ಪ್ರವಾಹದಿಂದ ನಲುಗಿ ಹೋಗಿದ್ದ ಜಿಲ್ಲೆಯಲ್ಲಿ ಮತ್ತೆ ಪ್ರವಾಹ ಉಂಟಾಗುವ ಭೀತಿ ಹೆಚ್ಚಾಗಿದೆ. ಚೇತರಿಕೆ ಕಾಣುತ್ತಿದ್ದ ನದಿ ಪಾತ್ರದ ಜನ ಜೀವನ ಮತ್ತೆ ಆತಂಕಕ್ಕೆ ಒಳಗಾಗಿದೆ.
ಹೆಚ್ಚಿದ ನಾರಾಯಣಪುರ ಜಲಾಶಯದ ನೀರು: ಆತಂಕದಲ್ಲಿ ಬಿಸಿಲನಾಡು - ರಾಯಚೂರು ಪ್ರವಾಹ
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ನಾರಾಯಣ ಪುರ ಜಲಾಶಯದ ನೀರಿನ ಮಟ್ಟ ಗಣನೀಯ ಏರಿಕೆ ಕಂಡಿದೆ. ಇನ್ನು ಜಲಾಶಯದಿಂದ 1,59,495 ಕ್ಯೂಸೆಕ್ ನೀರನ್ನ ಕೃಷ್ಣ ನದಿಗೆ ಹರಿದು ಬಿಡಲಾಗಿದ್ದು ಜಿಲ್ಲೆಯಲ್ಲಿ ಪ್ರವಾಹದ ಭೀತಿ ಉಂಟಾಗಿದೆ.
ತೀವ್ರ ಜಿಲ್ಲೆಯ ಜೀವನಾಡಿಯಾಗಿರುವ ನಾರಾಯಣಪುರ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಳವಾಗಿದೆ. ಬೆಳಗ್ಗೆ 10 ಗಂಟೆಯ ಜಲಾಶಯದಿಂದ ಸುಮಾರು 1,59,495 ಕ್ಯೂಸೆಕ್ ನೀರನ್ನ ಕೃಷ್ಣ ನದಿಗೆ ಹರಿದು ಬಿಡಲಾಗಿದೆ. ಒಂದು ವೇಳೆ ಜಲಾಯಶಯಕ್ಕೆ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಳವಾದರೆ ಮತ್ತಷ್ಟು ನೀರು ಹರಿದು ಬಿಡಲಾಗುತ್ತದೆ.
ಇದರಿಂದ ಜಿಲ್ಲೆಯ ದೇವದುರ್ಗ, ಲಿಂಗಸೂಗೂರು, ರಾಯಚೂರು ತಾಲೂಕಿನ ನದಿ ಪಾತ್ರಗಳು ಹಾಗೂ ನಡುಗಡ್ಡೆ ಪ್ರದೇಶಕ್ಕೆ ಮತ್ತೆ ಪ್ರವಾಹ ಸಂಕಷ್ಟ ಎದುರಾಗಲಿದೆ. ಕೆಲ ದಿನಗಳ ಹಿಂದೆ 6 ಲಕ್ಷ ಕ್ಕೂ ಅಧಿಕ ಕ್ಯೂಸೆಕ್ ನೀರನ್ನ ನದಿಗೆ ಹರಿದು ಬಿಟ್ಟದರಿಂದ ಹಲವು ಗ್ರಾಮಗಳಿಗೆ ನೀರು ನುಗ್ಗಿ, ರೈತರ ಹೊಲ-ಗದ್ದೆಗಳು ಬೆಳೆ ಹಾನಿ ಸಂಭವಿಸಿ ಕೋಟ್ಯಂತರ ರೂಪಾಯಿ ನಷ್ಟು ಸಂಭವಿಸಿತ್ತು. ಪ್ರವಾಹ ತಾಕಿದ ಬಳಿಕ ಚೇತರಿಸಿಕೊಳ್ಳುವತ್ತಿರುವಾಗಲೇ ಜಿಲ್ಲೆಗೆ ಪ್ರವಾಹ ಉಂಟಾಗುವ ಭೀತಿ ಹೆಚ್ಚಾಗಿದೆ.